ಮೈಸೂರು : ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಜೆಡಿಎಸ್ ಮಾಡುತ್ತಿದೆ. ವಿರೋಧ ಪಕ್ಷದವರು ಎಷ್ಟೇ ಬಾಯಿ ಬಡಿದುಕೊಂಡರು ಅಷ್ಟೇ, ಇಲ್ಲಿ ಸೇರಿರುವ ಜನರನ್ನು ನೋಡಿದ್ರೆ ನೀವು ಅವರ ಮೇಲೆ ಇಟ್ಟಿರುವ ನಂಬಿಕೆ ಗೊತ್ತಾಗತ್ತೆ. ಸಿದ್ದರಾಮಯ್ಯಗೆ ಮಸಿ ಬಳಿಯುವ ಕೆಲ್ಸ ಆಗ್ತಿದೆ. ನಾವು ನೀವು ಎಲ್ಲರೂ ಅವ್ರಿಗೆ ಶಕ್ತಿ ತುಂಬಬೇಕು. ಅವರ ಜೊತೆ ನಾವು ನಿಲ್ಲಬೇಕು ಎಂದು ವಿಪಕ್ಷಗಳ ವಿರುದ್ಧ ಸಚಿವ ಕೆ. ವೆಂಕಟೇಶ್ ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಬಿಜೆಪಿ,ಜೆಡಿಎಸ್ ನವರು ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡ್ತಿದ್ದಾರೆ. ಇದನ್ನ ಬಿಜೆಪಿ ಜೆ.ಡಿ.ಎಸ್ ನಾಯಕರು ನಿರಂತರವಾಗಿ ಮಾಡುತ್ತಿದ್ದಾರೆ. ಸುಳ್ಳನ್ನ ಸತ್ಯ ಮಾಡೋಕೆ ಹೊರಟರು ಸಿದ್ದರಾಮಯ್ಯರ ಮೇಲೆ ಜನರಿಗೆ ನಂಬಿಕೆ ಇದೆ. ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡುವವರಿಗೆ ಬುದ್ದಿ ಕಲಿಸುವ ಕೆಲಸ ಮಾಡಬೇಕು. ಸಿದ್ದರಾಮಯ್ಯರಿಗೆ ಶಕ್ತಿ ತುಂಬುವ ಕೆಲಸ ಮಾಡಬೇಕು. ಹಿಂದೆ ನಮ್ಮ ಸರ್ಕಾರ ತಂದಿದ್ದ ಕೆಲಸ ಬಿಜೆಪಿ ಸರ್ಕಾರ ಬಂದಾಗ ನಿಲ್ಲಿಸಿತ್ತು. ಪಶು ಭಾಗ್ಯ, ಜಾನುವಾರುಗಳಿಗೆ ಪರಿಹಾರ ಕೊಡುವ ಕೆಲಸವನ್ನು ನಿಲ್ಲಿಸಿದ್ರು. ಇದೀಗಾ ಮತ್ತೆ ಆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದೇವೆ. ಇದು ಬಿಜೆಪಿಯವರಿಗೆ ರೈತರ ಮೇಲೆ ಎಷ್ಟು ಗೌರವ ಇದೆ ಎಂದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.