ಕರ್ನಾಟಕ
BSY ಮನೆಯಲ್ಲಿ ಹೈವೋಲ್ಟೇಜ್ ಸಭೆ.. ರೆಬೆಲ್‌ಗಳ ಬಗ್ಗೆ ಚರ್ಚೆ?
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ..
ರಾಜ್ಯ ಬಿಜೆಪಿಯಲ್ಲಿ ಬಣ ಕಿತ್ತಾಟ ತಾರಕಕ್ಕೇರಿದೆ.. ಸರ್ಕಾರದ ವಿರುದ್ಧ ವಕ್ಫ್ ಹೋರಾಟ ನಡೆಯುತ್ತಿದ್ರೂ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಮ್ ಮಧ್ಯೆ ಟಾಕ್‌ಫೈಟ್ ನಡೆಯುತ್ತಿದೆ.. ಈ ಮಧ್ಯೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ.. ಬೆಂಗಳೂರು ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಬಿಎಸ್‌ವೈ, ವಿಜಯೇಂದ್ರ ಜೊತೆ ವಕ್ಫ್ ವಿರುದ್ಧ ಮುಂದಿನ ಹೋರಾಟ ಸಂಬಂಧ ಚರ್ಚೆ ನಡೆಸಲಾಗಿದೆ.. ಅಷ್ಟೇ ಅಲ್ಲದೆ ಬಿಜೆಪಿ ಒಳಗಿನ ರೆಬೆಲ್ ಟೀಂನ ಬಗ್ಗೆಯೂ ಚರ್ಚೆ ನಡೆದಿದೆ ಎನ್ನಲಾಗಿದೆ..