ವೈರಲ್

ಸಿಎಂಗೆ ಬಿಜೆಪಿ ಪ್ರತಿಭಟನೆ ಬಿಸಿ

ಲೋಕಾಯುಕ್ತ ಕಚೇರಿ ಬಳಿ ಧರಣಿ ಹೈಡ್ರಾಮ

ಮೈಸೂರು - ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಇದೆ ಎಂಬ ಆರೋಪ ಹಿನ್ನೆಲೆಯಲ್ಲಿ ಇಂದು ಲೋಕಾಯುಕ್ತ ಕಚೇರಿಯಲ್ಲಿ ತನಿಖೆ ಎದುರಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ತನಿಖೆಗೆ ಒಳಗಾಗಿದ್ದು , ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಧರಣಿ ನಡೆಸಿದರು. 

ಸಿಎಂ ಸಿದ್ದರಾಮಯ್ಯ ಬೆಳಿಗ್ಗೆ 10:10 ಕ್ಕೆ ತನಿಖೆಗಾಗಿ ಲೋಕಾಯುಕ್ತ ಕಚೇರಿಗೆ ಪ್ರವೇಶ ಮಾಡಿದ್ದಾರೆ. ಇತ್ತ ಕಚೇರಿ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು 10.16 ಕ್ಕೆ ಪ್ರತಿಭಟನೆಗೆ ಮುಂದಾಗಿ ಸಿಎಂ ರಾಜೀನಾಮೆಗೆ ಘೋಷಣೆಗಳನ್ನ ಕೂಗಿದರು. ಈ ವೇಳೆ ಮಹಿಳಾ ಪ್ರತಿಭಟನಾಕಾರರನ್ನ ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಲು ಬಂಧನ ಮಾಡಿದರು.