ಬೆಳಗಾವಿ: ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿ. ಅಲ್ಲಿಂದ ಎಂಟು ಶಾಸಕರು ಶೀಘ್ರದಲ್ಲೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ ನೀಡಿರುವ ಹೇಳಿಕೆಗೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಧ್ವನಿ ಗೂಡಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಲಕ್ಷಣ್ ಸವದಿ ಅವರು, ಬಿಜೆಪಿ ಮನೆಯೊಂದು 6 ಬಾಗಿಲು ಎನ್ನುವಂತಾಗಿದ್ದು, ನಾಯಕರಿಲ್ಲದ ಪಾರ್ಟಿಯಾಗಿದೆ. ಸಣ್ಣಪುಟ್ಟ ವೈಮನಸ್ಸು ಸರಿಪಡಿಸುವ ಸಾಮರ್ಥ್ಯ ಕೂಡ ಯಾರಿಗೂ ಇಲ್ಲ. ಮುಂದೆ ಬಿಜೆಪಿ ಭವಿಷ ನಶಿಸಿ ಹೋಗುತ್ತದೆ ಎಂದಿದ್ದಾರೆ.
ಬಿಜೆಪಿಯ ಬಹುತೇಕ ನಾಯಕರಿಗೆ ಭವಿಷ್ಯದ ಚಿಂತೆ ಎದುರಾಗಿದ್ದು, ಅವರಲ್ಲಿ ಆಂತರಿಕೆ ಬಿಕ್ಕಟ್ಟು ಎದುರಾಗಿದೆ. ಹೀಗಾಗಿ ಬಿಜೆಪಿಯ ಅವಕಾಶವಂಚಿತ ನಾಯಕರು ಕಾಂಗ್ರೆಸ್ ಗೆ ಬರಲಿದ್ದಾರೆ ಎಂದು ಲಕ್ಷ್ಮಣ್ ಸವದಿ ಭವಿಷ್ಯ ನುಡಿದಿದ್ದಾರೆ.