ಬೆಂಗಳೂರು - ಚನ್ನಪಟ್ಟಣ , ಸಂಡೂರು ಹಾಗೂ ಶಿಗ್ಗಾಂವಿ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ - ಜೆಡಿಎಸ್ ಜಂಟಿಯಾಗಿದ್ರೂ ಸೋತು ಸುಣ್ಣವಾಗಿದೆ. ಇದನ್ನ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಇದರ ಬೆನ್ನಲ್ಲೇ ವಕ್ಫ್ ವಿವಾದ ಮುಂದಿಟ್ಟು ರಾಜ್ಯ ಬಿಜೆಪಿ ನಾಯಕರು ಪರಸ್ಪರ ಪ್ರತಿಷ್ಠೆ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಈ ರಾಜ್ಯ ನಾಯಕರಾದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ .ವಿಜಯೇಂದ್ರ ಹಾಗೂ ಶಾಸಕ ಬಸವನಗೌಡ ಯತ್ನಾಳ್ ನಡುವಿನ ಪ್ರತಿಷ್ಠೆ ವಿಚಾರವಾಗಿ ಅಂತಿಮವಾಗಿ ಕ್ರಮ ಕೈಗೊಳ್ಳಲು ಖುದ್ದು ಕೇಂದ್ರ ಬಿಜೆಪಿ ನಾಯಕರು ಮಧ್ಯ ಪ್ರವೇಶ ಮಾಡುತ್ತಿದ್ದಾರೆ.
ಡಿ.3 ಬಿಜೆಪಿ ಕೋರ್ ಕಮಿಟಿ ಸಭೆ ಕರೆಯುವಂತೆ ರಾಜ್ಯ ನಾಯಕರಿಗೆ ಕೇಂದ್ರ ಸೂಚನೆ ನೀಡಿದೆ. ಈ ಪ್ರಕಾರ ಕೇಂದ್ರದಿಂದ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಿ ಭಿನ್ನಾಭಿಪ್ರಾಯ ಶಮನ , ಸೋಲಿನ ವಿಮರ್ಶೆ ಹೀಗೆ ಎಲ್ಲ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ.
ವಿರೋಧ ಪಕ್ಷವಾಗಿ ಆಡಳಿತ ಪಕ್ಷ ಕಾಂಗ್ರೆಸ್ ಟೀಕೆ ಮಾಡುವ ಬದಲು ಖುದ್ದು ತಾವೇ ಬಿಜೆಪಿ ಒಳ ಜಗಳ ಮಾಡಿಕೊಂಡು ರಾಜಕೀಯ ವಿರೋಧಿಗಳ ಟೀಕೆಗೆ ಗುರಿಯಾಗುತ್ತಿದ್ದಾರೆ.