ರಾಜ್ಯದಲ್ಲಿ ವಕ್ಫ್ ವಿವಾದಕ್ಕಿಂತ ಹೆಚ್ಚಾಗಿ ಬಿಜೆಪಿಯೊಳಗಿನ ಬಣ ರಾಜಕೀಯವೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ವಕ್ಫ್ ವಿವಾದದ ವಿರುದ್ಧವೇ ಹೋರಾಡಬೇಕಾದ ನಾಯಕರು, ಸ್ವಪಕ್ಷದೊಳಗಿನವರನ್ನೇ ಟಾರ್ಗೆಟ್ ಮಾಡುತ್ತಿರುವಂತೆ ಕಾಣುತ್ತಿದೆ. ಇದೀಗ ದಾವಣಗೆರೆ ಬಿಜೆಪಿಯಲ್ಲಿ ವಕ್ಫ್ ವಿವಾದದ ಹೋರಾಟಕ್ಕೆ, ವಿಜಯೇಂದ್ರ ವರ್ಸಸ್ ಯತ್ನಾಳ್ ಟೀಂ ಪೈಪೋಟಿಗೆ ಬಿದ್ದಿದೆ. ಅಂದ್ರೆ ವಕ್ಫ್ ಹೆಸರಿನಲ್ಲಿ ಎರಡೂ ತಂಡದ ನಾಯಕರು ಬೃಹತ್ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ.
ವಿಜಯೇಂದ್ರ ಬಣದಲ್ಲಿರುವ ರೇಣುಕಾಚಾರ್ಯ ದಾವಣಗೆರೆಯಲ್ಲಿ ಸಮಾವೇಶ ಘೋಷಣೆ ಮಾಡಿದ್ದಾರೆ. ಇದೇ ರೀತಿ ಯತ್ನಾಳ್ ಟೀಂ ಕೂಡ ಸಮಾವೇಶಕ್ಕೆ ತೀರ್ಮಾನಿಸಿದೆ. ಇದೀಗ ಎರಡೂ ಬಣದ ಸಮಾವೇಶ ಪತ್ರ ಹೈಕಮಾಂಡ್ ಅಂಗಳದಲ್ಲಿದ್ದ, ವರಿಷ್ಠರಿಗೀಗ ದೊಡ್ಡ ತಲೆ ನೋವಾಗಿದೆ. ಎರಡೂ ಬಣದ ಸಮಾವೇಶಕ್ಕೆ ಬಿಜೆಪಿ ಹೈಕಮಾಂಡ್ ಸಮ್ಮತಿ ನೀಡುವುದು ಬಹುತೇಕ ಡೌಟ್ ಎನ್ನಲಾಗಿದ್ದು, ಏನಾಗಲಿದೆ ಎಂದು ಕಾದು ನೋಡಬೇಕಾಗಿದೆ.