ಬೆಳಗಾವಿ : ಹರಿಯಾಣ, ಜಮ್ಮು ಕಾಶ್ಮೀರ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಂಸದ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ಎರಡು ರಾಜ್ಯದಲ್ಲಿ ಚುನಾವಣಾ ಫಲಿತಾಂಶ ಹೊರ ಬರ್ತಿದೆ. ಹರಿಯಾಣದಲ್ಲಿ ಬಿಜೆಪಿ ಅಭೂತಪೂರ್ವ ಜಯ ಸಾಧಿಸಿದೆ. ಮೂರನೇ ಬಾರಿಗೆ ಸರ್ಕಾರ ರಚಿಸುವಲ್ಲಿ ದಾಪುಗಾಲು ಹಾಕುತ್ತಿದೆ. ಹತ್ತು ವರ್ಷ ಮಾಡಿದ ಕೆಲಸ ಎಲ್ಲರ ನಿರೀಕ್ಷೆ ಮೀರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ದೇಶದಲ್ಲಿ ನರೇಂದ್ರ ಮೋದಿಯವರ ನಾಯಕತ್ವ ಬೇಕು ಅನ್ನೋ ಬಯಕೆ ಇದೆ ಎಂದು ಹೇಳಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಮೂರನೇ ಬಾರಿ ಬಿಜೆಪಿ ಅಧಿಕಾರ ಕೊಡ್ತಿದ್ದಾರೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಅತೀ ಹೆಚ್ಚು ಸೀಟ್ ಪಡೆದುಕೊಂಡಿದೆ. ಜಮ್ಮುವಿನಲ್ಲಿ ತಮ್ಮ ಪ್ರಾಬಲ್ಯ ತೋರಿಸಿಕೊಡುವ ಕೆಲಸ ಬಿಜೆಪಿ ಮಾಡಿದೆ. ಕಾಂಗ್ರೆಸ್, ನ್ಯಾಶನಲ್ ಕಾಂಗ್ರೆಸ್ ಅಧಿಕಾರಕ್ಕೆ ಬರ್ತಿದೆ. ಜಮ್ಮ ಕಾಶ್ಮೀರದಲ್ಲಿ ಈ ಹಿಂದೆ ಭಯದ ವಾತಾವರಣ ನೋಡ್ತಿದ್ದೇವು. ಈಗಿನ ವೋಟಿಂಗ್ ನೋಡಿದ್ರೆ ಪ್ರಜಾತಂತ್ರ ವ್ಯವಸ್ಥೆ ಗೆಲುವು ಆಗಿದೆ. ಜಮ್ಮು ಕಾಶ್ಮೀರ ಭಾರತದ ಅಂಗ ಅಂತಾ ಜನ ಹೇಳಿದ್ದಾರೆ. ಆರ್ಟಿಕಲ್ 370 ತೆಗೆದ ಮೇಲೆ ಆ ರೀತಿ ವಾತಾವರಣ ನಿರ್ಮಾಣವಾಗಿದೆ. ಭಯದ ವಾತಾವರಣ ಹೊರಟು ಹೋಗಿದೆ. ಅಲ್ಲಿರುವ ಯುವಕರಿಗೆ ಉದ್ಯೋಗ ಅವಕಾಶ ಸಿಗುತ್ತಿದೆ. ನರೇಂದ್ರ ಮೋದಿ, ಅಮಿತ್ ಶಾ ಅವರ ನಾಯಕತ್ವ ಅವರು ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಹರಿಯಾಣ ಫಲಿತಾಂಶ ಕುರಿತು ಕಾಂಗ್ರೆಸ್ ಅಸಮಾಧಾನ ವಿಚಾರವನ್ನು ಪ್ರಸ್ತಾಪಿಸಿದ ಅವರು, ಒಂದೊಂದು ರೌಂಡ್ ಗೆ ಚುನಾವಣೆ ಫಲಿತಾಂಶ ಬದಲಾಗುತ್ತಾ ಹೋಗುತ್ತೆ. ನೆಕ್ ಟು ನೆಕ್ ಇದ್ದಾಗ ಬದಲಾವಣೆ ಸಹಜ. ಬೆಳಗ್ಗೆ ಮುಂದೆ ಇದ್ವಿ ಸಂಜೆ ಹಿಂದೆ ಇದಿವಿ ಅಂದ್ರೆ ಆಗಲ್ಲ. ಜಮ್ಮು ಕಾಶ್ಮೀರದಲ್ಲಿ ಹಾಗೇ ಆಗಬೇಕಿತ್ತು. ಅಲ್ಲಿ ಯಾಕೆ ಹಿಂದೇಟು ಹಾಕಲಿಲ್ಲ. ಜನ ಬಯಸಿದ್ದಕ್ಕೆ ಹರಿಯಾಣದಲ್ಲಿ ರಿಸಲ್ಟ್ ಬಂದಿದೆ. ಚುನಾವಣಾ ಫಲಿತಾಂಶ ನೆಗೆಟಿವ್ ಬಂದಾಗ ಒಂದು ಮಾತಾಡುವುದು. ಪಾಸಿಟಿವ್ ಬಂದಾಗ ಮತ್ತೊಂದು ಮಾತಾಡುವುದು ಕಾಂಗ್ರೆಸ್ ನೀತಿ. ಈ ರೀತಿ ಅವರ ನಡುವಳಿಕೆ ಜನರು ಮೆಚ್ಚುವುದಿಲ್ಲ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಬಿಜೆಪಿ ಇದೇ ರಿಸಲ್ಟ್ ರಿಪೀಟ್ ಆಗುತ್ತೆ ಎಂದು ಕಿಡಿಕಾರಿದ್ದಾರೆ.