ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಬಂಡಾಯ ಸಾರಿರುವ ಯತ್ನಾಳ್ & ಟೀಂ,, ದೆಹಲಿಯಲ್ಲಿಯೇ ಬೀಡುಬಿಟ್ಟಿದೆ. ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ರೆಬೆಲ್ಸ್ ನಾಯಕರು, ವರಿಷ್ಠರ ಭೇಟಿಯಾಗಿ ದೂರು ನೀಡಿದ್ದಾರೆ ಎನ್ನಲಾಗಿದೆ. ಇಂದು ಬಿ.ಎಲ್. ಸಂತೋಷ್ ಭೇಟಿಯಾಗಿರುವ ಕುಮಾರ ಬಂಗಾರಪ್ಪ, ರಾಜ್ಯ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಿಂದ ಬಿ.ವೈ. ವಿಜಯೇಂದ್ರ ಕೆಳಗಿಳಿಸುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ನಿನ್ನೆ ಜೆ.ಪಿ ನಡ್ಡಾ ಭೇಟಿಯಾಗಿದ್ದ ರಮೇಶ್ ಜಾರಕಿಹೊಳಿ & ಕುಮಾರ ಬಂಗಾರಪ್ಪ ವಕ್ಫ್ ವಿಚಾರ ಸೇರಿ ರಾಜ್ಯ ಬಿಜೆಪಿ ಬಣ ಕಿತ್ತಾಟದ ಬಗ್ಗೆ ಸಮಾಲೋಚನೆ ನಡೆಸಿದ್ದರು. ಈಗ ರಾಜ್ಯದವರೇ ಆದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆ ಕುಮಾರ ಬಂಗಾರಪ್ಪ ಮಾತುಕತೆ ನಡೆಸಿರೋದು ಕುತೂಹಲ ಹೆಚ್ಚಿಸಿದೆ.