ತಮ್ಮ ಭೇಟಿಗೆ ಬಂದ ಭಕ್ತರೊಬ್ಬರ ತಲೆಯ ಮೇಲೆ, ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಪಾದ ಇಟ್ಟಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ಹೊಸ ವಿವಾದವನ್ನು ಸೃಷ್ಟಿಸಿದೆ.ಸರ್ಕಾರಿ ಶಾಲೆಯೊಂದರ ಮುಖ್ಯ ಶಿಕ್ಷಕರಾದ ವೀರಣ್ಣ ಗಣಾಚಾರಿ ಎಂಬುವರು, ಫೋಟೋವೊಂದನ್ನು ಹಂಚಿಕೊಂಡು 'ಮಕ್ಕಳೊಂದಿಗೆ ಮಗುವಾಗ್ತೀರಿ.. ಹಿರಿಯರೊಂದಿಗೆ ಹೀಗೆಕೆ ಶ್ರೀ ಗಳೇ' ಎಂದು ಪ್ರಶ್ನಿಸಿದ್ದಾರೆ.