ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಯಿಂದಾಗಿ ಜನಾಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಪ್ರಯಾಣಿಕರ ಸಂಖ್ಯೆಯಲ್ಲೂ ಭಾರಿ ಇಳಿಕೆಯಾಗಿತ್ತು. ಇದರಿಂದಾಗಿ ಮೆಟ್ರೋ ಪ್ರಯಾಣಿಕರ ಆಕ್ರೋಶಕ್ಕೆ ಬಿಎಂಆರ್‌ಸಿಎಲ್ ಕೊನೆಗೂ ಮಣಿದಿದೆ. ಶೇ 90 ರಿಂದ 100 ರಷ್ಟು ದರ ಹೆಚ್ಚಳ ಮಾಡಿರುವ ನಿಲ್ದಾಣಗಳ ಮಧ್ಯೆ ದರ ತುಸು ಇಳಿಕೆ ಮಾಡಿದ್ದು, ಪರಿಷ್ಕೃತ ದರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಮೆಟ್ರೋ ದರ ಏರಿಕೆ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದ ಬೆನ್ನಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಬಿಎಂಆರ್ಸಿಎಲ್ ಎಂಡಿ ಮಹೇಶ್ವರ್ ರಾವ್, ಯಾವ ನಿಲ್ದಾಣದಿಂದ ಯಾವ ನಿಲ್ದಾಣಕ್ಕೆ ದುಪ್ಪಟ್ಟು ದರ ಏರಿಕೆಯಾಗಿದೆಯೋ ಅಲ್ಲಿ ಸ್ಟೇಜ್ ಬೈ ಸ್ಟೇಜ್ ಮರ್ಜ್ ಮಾಡುವ ಮೂಲಕ ದರ ಕಡಿಮೆ ಮಾಡಲಾಗುವುದು. ಪರಿಷ್ಕೃತ ದರ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದಿದ್ದರು. ಅದರಂತೆ ಇಂದು ‘ನಮ್ಮ ಮೆಟ್ರೋ’ ಹೊಸ ದರ ಜಾರಿ ಮಾಡಿದ್ದು, ಒಟ್ಟು 10 ರೂಪಾಯಿ ಇಳಿಕೆ ಮಾಡಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಿದೆ.
ಹಿಂದಿನ ದರ ಮತ್ತು ಪರಿಷ್ಕೃತ ದರ :
ಮೆಜೆಸ್ಟಿಕ್ To ಬೈಯಪ್ಪನಹಳ್ಳಿ
ಏರಿಕೆಯಾಗಿದ್ದ ದರ: 60 ರೂಪಾಯಿ
ಪರಿಷ್ಕೃತ ದರ: 50 ರೂಪಾಯಿ
ಮೆಜೆಸ್ಟಿಕ್ To ಸಿಲ್ಕ್ ಇನ್ಸ್ಟಿಟ್ಯೂಟ್
ಏರಿಕೆಯಾಗಿದ್ದ ದರ: 70 ರೂಪಾಯಿ
ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ವೈಟ್ ಫೀಲ್ಡ್
ಏರಿಕೆಯಾಗಿದ್ದ ದರ: 90 ರೂಪಾಯಿ
ಪರಿಷ್ಕೃತ ದರ: 80 ರೂಪಾಯಿ
ಮೆಜೆಸ್ಟಿಕ್ To ಚಲ್ಲಘಟ್ಟ
ಏರಿಕೆಯಾಗಿದ್ದ ದರ: 70 ರೂಪಾಯಿ
ಪರಿಷ್ಕೃತ ದರ: 60 ರೂಪಾಯಿ
ಮೆಜೆಸ್ಟಿಕ್ To ರೇಷ್ಮೆ ಸಂಸ್ಥೆ
ಏರಿಕೆಯಾಗಿದ್ದು 70 ರೂಪಾಯಿ
ಇಳಿಕೆಯಾಗಿದ್ದು 60 ರೂಪಾಯಿ
ಮೆಜೆಸ್ಟಿಕ್ To ವಿಧಾನಸೌಧ
ಏರಿಕೆಯಾಗಿದ್ದ ದರ: 20
ಪರಿಷ್ಕೃತ ದರ: 10 ರೂಪಾಯಿ