ಬೆಂಗಳೂರು : ಹೊಸ ವರ್ಷಕ್ಕೆ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಗುಡ್ ನ್ಯೂಸ್ ಕೊಟ್ಟಿದೆ. ಚೀನಾದ ಚಾಲಕ ರಹಿತ ಮೆಟ್ರೋ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಸಂಚರಿಸಲಿದೆ. ಹೊಸ ವರ್ಷದಿಂದ ಸಂಚಾರ ಶುರು ಮಾಡಲಿದ್ದು, ಬೊಮ್ಮನಹಳ್ಳಿ ಟು ಎಲೆಕ್ಟ್ರಾನಿಕ್ ಸಿಟಿ ಟ್ರಾಫಿಕ್ ಜಾಮ್ಗೆ ಮುಕ್ತಿ ಸಿಗಲಿದೆ. ಜನವರಿಯಿಂದ ಆರ್ವಿ ರೋಡ್ – ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಮಾಡಲಿದೆ. ಇನ್ಫೋಸಿಸ್ ಸೇರಿದಂತೆ ಸಾವಿರಾರು ಐಟಿ ಬಿಟಿ ಕಂಪನಿಗಳಿಗೆ ಈ ಮಾರ್ಗ ಸಂಪರ್ಕ ಕಲ್ಪಿಸುತ್ತದೆ. ಚಾಲಕ ರಹಿತ ಮೆಟ್ರೋ ಮಾರ್ಗ 19.15 ಕಿಮೀ ಇದ್ದು, ಆರ್ವಿ ರೋಡ್ ಹಾಗೂ ಬೊಮ್ಮಸಂದ್ರದ ನಡುವೆ ಸಂಪರ್ಕ ಕಲ್ಪಿಸಲಿದೆ. ಈಗಾಗಲೇ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಮುಗಿಸಿರುವ ಚಾಲಕರಹಿತ ಮೆಟ್ರೋಗೆ, ರೈಲ್ವೆ ಸುರಕ್ಷತಾ ಆಯುಕ್ತರು ಕೂಡ ಈಗಾಗಲೇ ಗ್ರಿನ್ ಸಿಗ್ನಲ್ ತೋರಿದ್ದಾರೆ.