ಕರ್ನಾಟಕ

ಬೈಕ್‌ನಿಂದ ಬಿದ್ದಿದ್ದ ಮಹಿಳೆ ಮೇಲೆ ಬಿಎಂಟಿಸಿ ಬಸ್‌ ಹರಿದು ಸಾವು..!

ಕಾಮಾಕ್ಷಿಪಾಳ್ಯದ ನಿವಾಸಿ ಸರೋಜಾ ಎನ್ನುವವರು ಜ್ಞಾನಭಾರತಿಯಲ್ಲಿ ಮದುವೆಗೆ ಹೋಗಿ ಸಹೋದರನ ಜೊತೆ ವಾಪಸ್‌ ಆಗುತ್ತಿದ್ದರು.. ಈ ವೇಳೆ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್‌ನ್ನು ತಕ್ಷಣ ತೆಗೆಯಲಾಗಿದೆ..

ಕಾರಿನ ಡೋರ್‌ಗೆ ಬೈಕ್‌ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದ ಮಹಿಳೆ ಮೇಲೆ ಬಿಎಂಟಿಸಿ ಬಸ್ ಹರಿದು ಮೃತಪಟ್ಟಿರುವ ಘಟನೆ ಬೆಂಗಳೂರಿನ ನಾಯಂಡಹಳ್ಳಿ ಬಳಿ ನಡೆದಿದೆ.. ಕಾಮಾಕ್ಷಿಪಾಳ್ಯದ ನಿವಾಸಿ ಸರೋಜಾ ಎನ್ನುವವರು ಜ್ಞಾನಭಾರತಿಯಲ್ಲಿ ಮದುವೆಗೆ ಹೋಗಿ ಸಹೋದರನ ಜೊತೆ ವಾಪಸ್‌ ಆಗುತ್ತಿದ್ದರು.. ಈ ವೇಳೆ ರಸ್ತೆಯಲ್ಲಿ ಮುಂದೆ ನಿಂತಿದ್ದ ಕಾರಿನ ಡೋರ್‌ನ್ನು ತಕ್ಷಣ ತೆಗೆಯಲಾಗಿದೆ.. ಇದರಿಂದ ಡೋರ್‌ಗೆ ಬೈಕ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದಾರೆ.. ಈ ಸಮಯದಲ್ಲಿ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಸರೋಜಾಯವರ ಮೇಲೆ ಹರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.. ಘಟನೆ ಸಂಬಂಧ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ..