ದೇಶ

ಕಿನ್ನಡ ಅಖಾಡದಿಂದ ಬಾಲಿವುಡ್‌ ಸುಂದರಿ ಮಮತಾ ಕುಲಕರ್ಣಿ ವಜಾ

90ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ, ನಾಗಾಸಾದ್ವಿಯಾಗಿ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಂಗಳಮುಖಿಯರೇ ಇರುವ ಕಿನ್ನರ ಅಖಾಡದಲ್ಲಿ ದೀಕ್ಷೆ ಸ್ವೀಕರಿಸಿದ್ದರು.

ಬಾಲಿವುಡ್‌ ಹಾಗೂ ಸೌತ್‌ ಸಿನಿಮಾದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ಮಮತಾ ಕುಲಕರ್ಣಿ ಕಿನ್ನರ ಅಖಾಡದಿಂದ ವಜಾ ಆಗಿದ್ದಾರೆ. ರಾಜದ್ರೋಹದ ಆರೋಪದಲ್ಲಿ ಮಮತಾ ಕುಮಕರ್ಣಿ ವಿರುದ್ಧ ಕಿನ್ನರ ಅಖಾಡದ ಸಂಸ್ತಾಪಕ ರಿಷಿ ಅಜಯ್‌ ದಸ್‌ ಕ್ರಮ ಜರುಗಿಸಿದ್ದಾರೆ. 

ಮಹಾಮಂಡಳೇಶ್ವರಿಯಾಗಿ ನೇಮಕವಾಗಿದ್ದ ಮಮತಾ ಕುಲಕರ್ಣಿ ಅವರಿಗೆ ನೂರಾರು ಸನ್ಯಾಸಿಗಳ ಎದುರೇ ದಿಕ್ಷೆ ನೀಡಲಾಗಿತ್ತು. ಈ ಬಗ್ಗೆ  ಮಮತಾ ಕೂಡ ಆಧ್ಯಾತ್ಮ ಸಾಧನೆಗಾಗಿ ಸನ್ಯಾಸ ಪಡೆಯುವುದಾಗಿ ಹೇಳಿದ್ರು. ಆದ್ರೇ ಇದೀಗ ಮಮತಾ ಕುಲಕರ್ಣಿ ಕಿನ್ನರ ಅಖಾಡದಿಂದ ವಜಾಗೊಂಡಿದ್ದಾರೆ.

90ರ ದಶಕದಲ್ಲಿ ಪಡ್ಡೆ ಹುಡುಗರ ಹೃದಯಕ್ಕೆ ಕಚಕುಳಿ ಇಟ್ಟಿದ್ದ ಬಾಲಿವುಡ್ ಹಾಟ್ ಕ್ವೀನ್ ಮಮತಾ ಕುಲಕರ್ಣಿ,  ನಾಗಾಸಾದ್ವಿಯಾಗಿ ಪ್ರಯಾಗ್‌ ರಾಜ್‌ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಮಂಗಳಮುಖಿಯರೇ ಇರುವ ಕಿನ್ನರ ಅಖಾಡದಲ್ಲಿ  ದೀಕ್ಷೆ ಸ್ವೀಕರಿಸಿದ್ದರು. 

ಮಾಡೆಲಿಂಗ್ ಮೂಲಕ ಸಿನೆಮಾ ಇಂಡಸ್ಟ್ರಿ ಪ್ರವೇಶಿಸಿದ ಮಮತಾ ಕುಲಕರ್ಣಿ, 10ಕ್ಕೂ ಹೆಚ್ಚು ಹಿಟ್ ಸಿನೆಮಾ ನೀಡಿದ್ದಾರೆ. ಅಕ್ಷಯ್ ಕುಮಾರ್, ಗೋವಿಂದ್, ಅಮಿರ್ ಖಾನ್ ಸೇರಿ ಹಲವು ನಾಯಕರ ಜೊತೆ ನಟಿಸಿದ್ದಾರೆ. ಅಂದಿನ ಕಾಲದಲ್ಲೇ ಮೈ ಚಳಿ ಬಿಟ್ಟು ಡ್ಯಾನ್ಸ್ ಮಾಡುತ್ತಿದ್ದ ಮಮತಾ ಕುಲಕರ್ಣಿ, ಬಾಲಿವುಡ್‌ನಲ್ಲಿ ಹಾಟ್‌ ನಟಿ ಎಂದೇ ಗುರುತಿಸಿಕೊಂಡಿದ್ದರು.. 52ರ ವರ್ಷ ಪ್ರಾಯದ ನಟಿ ಮಮತಾ ಕುಲಕರ್ಣಿ,  2002ರಲ್ಲಿ ಬಿಡುಗಡೆಯಾದ ಕಭಿ ತುಮ್ ಕಭಿ ಹಮ್ ಅವರು ನಟಿಸಿದ ಕೊನೆಯ ಬಾಲಿವುಡ್‌ ಚಿತ್ರ.