ತಿರುಪತಿ - ವಿಶ್ವಪ್ರಸಿದ್ಧ ತಿರುಪತಿ ಲಾಡು ಕಲಬೆರಿಕೆ ಪ್ರಕರಣದ ಸದ್ದಿನ ಬಳಿಕ ಮತ್ತೆ ತಿರುಮಲ ಸುದ್ದಿಗೆ ಬಂದಿದೆ. ಆಂಧ್ರಪ್ರದೇಶದ ತಿರುಪತಿಯ ಹೋಟೆಲ್ಗಳಲ್ಲಿ ಬಾಂಬ್ ಇರುವ ಬಗ್ಗೆ ಕರೆ ಮತ್ತು ಇಮೇಲ್ ಮೂಲಕ ಮಾಹಿತಿ ನೀಡಲಾಗಿದೆ. ಈ ಸಂಬಂಧ ಬಾಂಬ್ ಸ್ಫೋಟದ ಪರಿಶೀಲನಾ ತಂಡ , ತಿರುಪತಿ ಪೊಲೀಸರು ಹೋಟೆಲ್ಗಳ ತಪಾಸಣೆ ಮಾಡಿದ್ದಾರೆ.
ವಿವಿಧ ಹೋಟೆಲ್ಗಳಲ್ಲಿ ತಡರಾತ್ರಿ 10 ಗಂಟೆಯಿಂದ ಮುಂಜಾನೆ 2 ಗಂಟೆಯವರೆಗೂ ತಪಾಸಣೆ ನಡೆದಿದೆ. ಬೆದರಿಕೆ ಮೇಲ್ಗಳಲ್ಲಿ ಲೀಲಾ ಮಹಲ್ ಬಳಿ ಮೂರು ಹೋಟೆಲ್ಗಳನ್ನ ಸ್ಪೋಟಿಸುವುದಾಗಿ ಬೆದಿಕೆ ಹಾಕಲಾಗಿತ್ತು. ಸದ್ಯ ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಬೆದರಿಕೆ ಕರೆಗಳ ಮಾಹಿತಿ ಪತ್ತೆ ಹಚ್ಚುವುದರಲ್ಲಿ ಕಾರ್ಯನಿರತರಾಗಿದ್ದಾರೆ.