ಕರ್ನಾಟಕ

ಬೆಂಗಳೂರಿನ HBC ಬ್ಯಾಂಕ್ ಗೆ ಬಾಂಬ್ ಬೆದರಿಕೆ ಮೇಲ್..!

ಬೆಂಗಳೂರಿನ HBC ಬ್ಯಾಂಕ್ ಗೆ ಕಿಡಿಗೇಡಿಗಳು ಹುಸಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ  HBC ಬ್ಯಾಂಕ್ ಗೆ ಹುಸಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಲಾಗಿದೆ. ತಕ್ಷಣವೇ ಬ್ಯಾಂಕ್ ಆಡಳಿತ ಮಂಡಳಿ ಬ್ಯಾಂಕ್ ಸಿಬ್ಬಂದಿಯನ್ನು ಹೊರಕಳುಹಿಸಿದ್ದಾರೆ. ನಿಮ್ಮ ಬ್ಯಾಂಕ್ ಗೆ ಬಾಂಬ್ ಇಟ್ಟಿದ್ದೇವೆ. ಬ್ಲಾಸ್ಟ್ ಆಗುತ್ತೆ ಎಂದು ದುಷ್ಕರ್ಮಿಗಳು ಮೇಲ್ ಕಳುಹಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಲಸೂರು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದ್ರೆ ಇಲ್ಲಿಯವರೆಗೆ ಯಾವುದೇ ಅನುಮಾನಾಸ್ಪದ ವಸ್ತುಗಳು ದೊರಕಿಲ್ಲ.