ದೇಶ

150 ಅಡಿ ಆಳದ ಬೋರ್‌ವೆಲ್‌ಗೆ ಬಿದ್ದ ಬಾಲಕ..! ರೆಸ್ಕ್ಯೂನೇ ಸವಾಲು..!

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 150 ಅಡಿ ಆಳದ ಬೋರ್​ವೆಲ್​ನಲ್ಲಿ ಬಾಲಕ ಆರ್ಯನ್ ಸಿಲುಕಿರುವ ಘಟನೆ ನಡೆದಿದೆ..

ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ 150 ಅಡಿ ಆಳದ ಬೋರ್ವೆಲ್ನಲ್ಲಿ ಬಾಲಕ ಆರ್ಯನ್ ಸಿಲುಕಿರುವ ಘಟನೆ ನಡೆದಿದೆ.. ಕಲಿಖಾಡ್ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದ್ದು, ಬಾಲಕನ ರಕ್ಷಣೆಗೆ ಕಾರ್ಯಾಚರಣೆ ಮುಂದುವರೆದಿದೆ.. ಪೈಪ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಗುತ್ತಿದೆ, ಅಷ್ಟೇ ಅಲ್ಲದೇ ಬಾಲಕ ಚಲನವಲನ ಗಮನಿಸಲು ಬೋರ್‌ವೆಲ್‌ ಆಳದಲ್ಲಿ ಕ್ಯಾಮೆರಾವನ್ನು ಬಿಡಲಾಗಿದೆ.. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಸಹ ಸಹಾಯಕ್ಕೆ ಕರೆಸಲಾಗಿದೆ.. ಸತತ ಮೂರವನೇ ದಿನವೇ ಬಾಲಕನ ರಕ್ಷಣಾಕಾರ್ಯಾಚರಣೆ ಮುಂದುವರೆದಿದ್ದು, ಪೋಷಕರ ಅಕ್ರಂದನ ಮುಗಿಲು ಮುಟ್ಟಿದೆ.. ದೌಸಾ ಡಿಸಿ ದೇವೇಂದ್ರ ಕುಮಾರ್  ಸೇರಿ ಸ್ಥಳೀಯ ಅಧಿಕಾರಿಗಳು ಸಹ ರಕ್ಷಣಾ ಕಾರ್ಯಗಳ ಮೇಲ್ವಿಚಾರಣೆಗಾಗಿ ಪೊಲೀಸರೊಂದಿಗೆ ಘಟನಾ ಸ್ಥಳದಲ್ಲಿದ್ದಾರೆ.. ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದು, ಬಾಲಕನ ಸ್ಥಿತಿಯ ಬಗ್ಗೆ ಆತಂಕದಿಂದ ಕಾಯುತ್ತಿದ್ದಾರೆ..