ತುಮಕೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡುವ ವಿಚಾರ ಹೊಸ ವಿವಾದವನ್ನೇ ಸೃಷ್ಟಿ ಮಾಡಿದೆ. ತಪ್ಪು ಮಾಹಿತಿ ಅಥವಾ ಬಿಪಿಎಲ್ ಕಾರ್ಡ್ ನ ಅರ್ಹತ ಮಿತಿ ಮೀರಿದರವನ್ನು ಗುರುತಿಸಿ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಕ್ರಮಕ್ಕೆ ವಿರೋಧ ಪಕ್ಷಗಳಿಂದ ಹಾಗೂ ಜನ ಸಾಮಾನ್ಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಬಿಪಿಎಲ್ ಕಾರ್ಡ್ ರದ್ದು ವಿಚಾರಕ್ಕೆ ಸಂಬಂಧಿಸಿದಂತೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಜನರಲ್ಲಿ ಆತಂಕ ಬೇಡ. ಯಾರು ಅರ್ಹರಿದ್ದಾರೆ ಅವರಿಗೆ ಖಂಡಿತ ತೊಂದರೆ ಆಗಲ್ಲ.
ನಮ್ಮ ಜಿಲ್ಲೆಯಲ್ಲಿ 4ಸಾವಿರ ಜನ ಆದಾಯ ತೆರಿಗೆದಾರರಿದ್ದಾರೆ. 300 ಜನ ಗೌರ್ನಮೆಂಟ್ ಎಂಪ್ಲಾಯ್ ಬಳಿ ಬಿಎಲ್ ಕಾರ್ಡ್ ಇದೆ ಎಂಬ ಮಾಹಿತಿಯಿದೆ. 19 ಸಾವಿರ ಜನರ ಆದಾಯ 1.2 ಲಕ್ಷಕ್ಕಿಂತ ಹೆಚ್ಚಿದೆ. ಹೀಗಾಗಿ ಕಾರ್ಡ್ ಅನರ್ಹಕ್ಕೆ ಮೊದಲು ಕಂಡಿಷನ್ ಏನೇನು ಅಂತ ತಿಳಿದುಕೊಳ್ಳಬೇಕು. ಡೆಸ್ಕ್ ವರ್ಕ್ ತರ ನಾವು ಕೆಲಸ ಮಾಡಲ್ಲ, ಸ್ಥಳಕ್ಕೆ ಪುಡ್ ಇನ್ಸೆಪೆಕ್ಟರ್, ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಚೆಕ್ ಮಾಡಿಸಿ. ಅದರಲ್ಲಿ ನೈಜತೆಯಿದ್ದರೆ ಮಾತ್ರ ಕಾರ್ಡ್ಗಳನ್ನು ರದ್ದು ಮಾಡಲಾಗುತ್ತದೆ ಎಂದು ತಿಳಿಸಿದರು.