ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ಚಿನ್ನದ ಅಂಬಾರಿ ಹಾಗೂ ಅರಮನೆಯನ್ನ ನೋಡಲು ಸಾವಿರಾರು ಪ್ರವಾಸಿಗರು ಪ್ರತಿನಿತ್ಯ ಮೈಸೂರಿಗೆ ತೆರಳುತ್ತಾರೆ. ಆದ್ರೆ ಮೈಸೂರು ತೆರಳುವ ಪ್ರವಾಸಿಗರಿಗೆ ಈಗ ನಿರಾಸೆಯಾಗಿದೆ. ಮೈಸೂರು ಅರಮನೆಗೆ ಪ್ರವಾಸಿಗರು ಭೇಟಿ ನೀಡಿ ಚಿನ್ನದ ಅಂಬಾರಿ ವೀಕ್ಷಣೆ ಮಾಡುತ್ತಾರೆ. ಆದರೆ ಇದೀಗ ಅಂಬಾರಿ ವೀಕ್ಷಣೆಗೆ ಕೆಲ ಕಾಲ ಬ್ರೇಕ್ ಬಿದ್ದಿದೆ.
ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದ್ದು, ಪ್ರವಾಸಿಗರಿಗೆ ನಿರಾಸೆಯಾಗಿದೆ. ಚಿನ್ನದ ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಕೆಲವು ದಿನ ಅವಕಾಶವಿರುವುದಿಲ್ಲ. ಹೀಗಾಗಿ ಮೈಸೂರು ಪ್ರವಾಸಿಗರು ನಿರಾಸೆಯಲ್ಲಿದ್ದಾರೆ.