ಸುಳ್ಯ : ದ್ವೇಷದಿಂದ ವೃದ್ಧನೊಬ್ಬ ತಮ್ಮನ ಹೆಂಡತಿಯನ್ನೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ್ದ ಘಟನೆಯೊಂದು ನಡೆದಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಯಭಾರತಿ (56) ಎಂಬ ಮಹಿಳೆ ಸಾವನ್ನಪ್ಪಿದ್ದಾಳೆ.
ರಾತ್ರಿಯ ವೇಳೆ ಮಲಗಿದ್ದಾಗ ಶಂಕರ ನಾಯಕ್ ಎಂಬುವವರು ಕಿಟಕಿ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಜಯಭಾರತಿ ಗಂಭೀರ ಗಾಯಗೊಂಡಿದ್ದರು. ಆದರೆ ಜಯಭಾರತಿ ಯವರ ದೇಹದ ಭಾಗ ಶೇ.80 ರಷ್ಟು ಸುಟ್ಟು ಹೋಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ಪೊಲೀಸ್ ವರದಿಯ ಪ್ರಕಾರ, ಜಯಭಾರತಿಯ ಪತಿ ಕಳೆದ ವರ್ಷ ಮೃತಪಟ್ಟಿದ್ದರು, ಜೊತೆಗೆ ಮಗ ಕೂಡ ವಿದೇಶಕ್ಕೆ ಹೋಗಿದ್ದರು. ಈ ಹಿನ್ನಲೆ ಮನೆಯಲ್ಲಿ ಶಂಕರ ಹಾಗೂ ಜಯಭಾರತಿ ಇಬ್ಬರೇ ಇದ್ದರು ಎನ್ನಲಾಗಿದೆ. ಇವರಿಬ್ಬರ ನಡುವೆ ಆಗಾಗ ಗಲಾಟೆಯಾಗುತ್ತಿದ್ದು, ಸಿಟ್ಟಿನಲ್ಲಿ ಶಂಕರ ಮಹಿಳೆಗೆ ಬೆಂಕಿ ಹಚ್ಚಿದ್ದಾನೆ ಎಂದು ತಿಳಿಸಿದ್ದಾರೆ. ಸದ್ಯ ಈ ಘಟನೆಯ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಶಂಕರ ನನ್ನು ಪೊಲೀಸರು ಬಂಧಿಸಿದ್ಧಾರೆ.