ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಅಸಮಾಧಾನ ಭುಗಿಲೆದ್ದಿದೆ.. ಮುಖ್ಯಮಂತ್ರಿ ಸಲಹೆಗಾರರ ಹುದ್ದೆಗೆ ಅಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ರಾಜೀನಾಮೆ ನೀಡುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಬೆಳವಣಿಗೆಯ ಮುನ್ಸೂಚನೆ ದೊರೆತಿದೆ.. ಈ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.. ಮುಖ್ಯಮಂತ್ರಿ ಸಲಹೆಗಾರರ ಹುದ್ದೆಗೆ ಶಾಸಕ ಬಿ.ಆರ್. ಪಾಟೀಲ್ ಏಕೆ ರಾಜೀನಾಮೆ ಕೊಟ್ರು ಅಂತಾ ಗೊತ್ತಿಲ್ಲ..? ರಾಜೀನಾಮೆ ಕೊಡುವ ಬಗ್ಗೆ ಸಿದ್ದರಾಮಯ್ಯಗೆ ಅವರು ಎಲ್ಲಾ ಹೇಳಿರ್ತಾರೆ, ಏಕೆ ಕೊಡ್ತೇನೆ ಅಂತಾನೂ ವಿವರಿಸಿರುತ್ತಾರೆ ಎಂದಿದ್ದಾರೆ..