ಮೈಸೂರು : ಮಹಾರಾಣಿ ಕಾಲೇಜಿನಲ್ಲಿ ಕಟ್ಟಡ ಕುಸಿದು, ಕಟ್ಟಡದ ಕೆಳಗೆ ಸಿಲುಕಿದ್ದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಕುಸಿದ ಕಟ್ಟಡದ ಕೆಳಗೆ ಸಿಲುಕಿದ್ದ ಯುವಕ ಸಾವನ್ನಪ್ಪಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದ ಸದ್ದಾಂ ಎಂಬುವವರ ಮೃತದೇಹವನ್ನ ಹೊರತೆಗೆಯಲಾಗಿದೆ.
ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಟ್ಟು ಮೃತದೇಹವನ್ನ ಹೊರತೆಗೆದಿದ್ದಾರೆ. ಈ ಸಂಬಂಧ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.