ದೇಶ

ಪಂಜಾಬ್‌ನ ಗೋಲ್ಡನ್ ಟೆಂಪಲ್‌ನಲ್ಲಿ ಮತ್ತೆ ಗುಂಡಿನ ಸದ್ದು

ಪಂಜಾಬ್‌ನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‌ನಲ್ಲಿ ಗುಂಡಿನ ಸದ್ದು ಮೊಳಗಿದೆ..

ಪಂಜಾಬ್‌ನ ಅಮೃತಸರದಲ್ಲಿರುವ ಸಿಖ್ಖರ ಪವಿತ್ರ ಸ್ಥಳ ಗೋಲ್ಡನ್ ಟೆಂಪಲ್‌ನಲ್ಲಿ ಗುಂಡಿನ ಸದ್ದು ಮೊಳಗಿದೆ.. ಹಾಡಹಗಲೇ ಅಕಾಲಿದಳ ನಾಯಕ ಸುಖ್ಬೀರ್ ಸಿಂಗ್ ಬಾದಲ್ ಮೇಲೆ ಫೈರಿಂಗ್ ನಡೆದಿದೆ.. ನೂರಾರು ಬೆಂಬಲಿಗರು, ಭಕ್ತರ ಮುಂದೆಯೇ ಭಯಾನಕ ದಾಳಿಯಾಗಿದೆ.. ಸ್ವಲ್ಪದರಲ್ಲಿಯೇ ಮಾಜಿ ಡಿಸಿಎಂ ಸುಖ್ಬೀರ್ ಸಿಂಗ್ ಬಾದಲ್ ಬದುಕುಳಿದಿದ್ದು, ನಾರಾಯಣ್ ಸಿಂಗ್ ಚೌರಾ ಎಂಬಾತ ಫೈರಿಂಗ್ ಮಾಡ್ತಿದ್ದಂತೆ ಅಲ್ಲೇ ಇದ್ದ ಬಾದಲ್ ಬೆಂಬಲಿಗರು ತಡೆದಿದ್ದಾರೆ..

ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಬೆಂಬಲಿಸಿದ್ದಕ್ಕಾಗಿ, ಪಂಜಾಬ್‌ನ ಮಾಜಿ ಡಿಸಿಎಂ ಸುಖಬೀರ್ ಸಿಂಗ್ ಬಾದಲ್ ಸೇರಿ ಬೆಂಬಲಿಗರು ಧಾರ್ಮಿಕ ಶಿಕ್ಷೆ ನೀಡಿದ್ರು.. ಇದರ ಭಾಗವಾಗಿಯೇ ಗೋಲ್ಡನ್ ಟೆಂಪಲ್ನಲ್ಲಿ ಎಲ್ಲರೂ ‘ಸೇವೆʼ ಸಲ್ಲಿಸುತ್ತಿದ್ದರು..  ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಬಾದಲ್ ವೀಲ್ಚೇರ್ನಲ್ಲಿದ್ರು.. ಸುಖಬೀರ್ ಸಿಂಗ್ ಟೆಂಪಲ್ ಆವರಣದಲ್ಲಿ ಕೂತಿದ್ದ ವೇಳೆ, ಎಂಟ್ರಿ ಕೊಡುವ ನಾರಾಯಣ್ ಸಿಂಗ್ ಚೌರಾ, ಪಿಸ್ತೂಲ್ ತೆಗೆದು ಫೈರಿಂಗ್ ಮಾಡಿದ್ದಂತೆ ಅಲ್ಲೇ ಇದ್ದ ಬೆಂಬಲಿಗರು ಆಗುಂತಕನನ್ನ ಸೆರೆ ಹಿಡಿದಿದ್ದಾರೆ.. ದಾಳಿಯಿಂದ ಬಾದಲ್ ಬಚಾವ್ ಆಗಿದ್ದು, ಆಗುಂತಕ ಹಾರಿಸಿದ ಗುಂಡು ಗೋಲ್ಡನ್ ಟೆಂಪಲ್ ಗೋಡೆ ಸೀಳಿದೆ..

ಗೋಲ್ಡನ್ ಟೆಂಪಲ್‌ನ ಇಂದಿನ ದಾಳಿ ಮತ್ತೊಂದು ಕಹಿ ಘಟನೆ ನೆನಪಿಸಿದೆ..ಪ್ರತ್ಯೇಕ ಖಲಿಸ್ತಾನಿ ಹೋರಾಟ ಹತ್ತಿಕ್ಕುವ ಸಂಬಂಧ ದಿವಂಗತ ಇಂದಿರಾಗಾಂಧಿ, 1984ರಲ್ಲಿ ‘ಆಪರೇಷನ್ ಬ್ಲೂಸ್ಟಾರ್’ನಡೆಸಿದ್ದರು.. ಇದೇ ಕಾರ್ಯಾಚರಣೆ ವೇಳೆ ಮದ್ದು-ಗುಂಡುಗಳು ಸಿಖ್ಕರ ಪವಿತ್ರ ದೇವಾಲಯದ ಗೋಡೆಯನ್ನ ಸೀಳಿದ್ದವು.. ಇದಕ್ಕೆ ಪ್ರತಿಕಾರವಾಗಿ ಇಂದಿರಾ ಗಾಂಧಿ ಹತ್ಯೆ ನಡೆದಿದ್ದು ಇದೀಗ ಇತಿಹಾಸ.. ಇಂದಿರಾ ನಡೆಸಿದ್ದ ʼಆಪರೇಷನ್ ಬ್ಲೂಸ್ಟಾರ್ʼ ಕುರುಹು ಇನ್ನೂ ಮಾಸಿಲ್ಲ, ಈ ಮಧ್ಯೆ ಗೋಲ್ಡನ್ ಟೆಂಪಲ್ನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ..

ಮಾಜಿ ಡಿಸಿಎಂ ಬಾದಲ್ ಮೇಲೆ ಗೋಲ್ಡನ್ ಟೆಂಪಲ್‌ನಲ್ಲಿ ಫೈರಿಂಗ್ ಆಗ್ತಿದ್ದಂತೆ ಭದ್ತತಾ ಪಡೆಗಳು ತಕ್ಷಣವೇ ಅಲರ್ಟ್ ಆಗಿ ನಾರಾಯಣ್ ಸಿಂಗ್ನನ್ನ ವಶಕ್ಕೆ ಪಡೆದಿವೆ.. ಬಾದಲ್ ಮೇಲಿನ ದಾಳಿಗೆ ಕಾರಣ ಏನು ಅಂತಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.. ದಾಳಿ ಬೆನ್ನಲ್ಲೇ ಗೋಲ್ಡನ್ ಟೆಂಪಲ್ ಸುತ್ತ ಭದ್ರತಾ ವ್ಯವಸ್ಥೆ ಹೆಚ್ಚಿಸಲಾಗಿದೆ.. ಲಕ್ಷಾಂತರ ಮಂದಿ ಆಗಮಿಸುವ ಸ್ಥಳದಲ್ಲಿ ನಡೆದಿರುವ ಗುಂಡಿನ ದಾಳಿಯನ್ನ ಧಾರ್ಮಿಕ ಮುಖಂಡರು ಖಂಡಿಸಿದ್ದಾರೆ..