ಬೈಲಹೊಂಗಲ : KSRTC ಬಸ್ ಮತ್ತು ಸೋಯಾಬೀನ್ ರಾಶಿಯ ಯಂತ್ರ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಮಲಪ್ರಭಾ ನದಿ ಬಳಿ ನಡೆದಿದೆ. ಬಸ್ ನಲ್ಲಿ ಸುಮಾರು 6 ಕ್ಕಿಂತ ಹೆಚ್ಚು ಜನ ಪ್ರಯಾಣಿಕರು ಗಾಯಗೊಂಡಿದ್ದಾರೆ.

ಈ ಸಾರಿಗೆ ಬಸ್ ಧಾರವಾಡದಿಂದ ಬೈಲಹೊಂಗಲ ಮಾರ್ಗ ಮಧ್ಯೆ ಮಲಪ್ರಭಾ ನದಿ ಪಕ್ಕದಲ್ಲಿ ಸೋಯಾಬೀನ್ ರಾಶಿ ಯಂತ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಕಬ್ಬಿನ ಗದ್ದೆಗೆ ನುಗ್ಗಿದ್ದು, ಭೀಕರ ಅಪಘಾತ ತಪ್ಪಿದಂತ್ತಾಗಿದೆ. ಗಾಯಗೊಂಡ ನಿರ್ವಾಹಕ ಹಾಗೂ ಪ್ರಯಾಣಿಕರನ್ನು ಜಾಲಿಕೊಪ್ಪ ಗ್ರಾಮಸ್ಥರು ಬೈಲಹೊಂಗಲ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಿದ್ದಾರೆ.