ಕರ್ನಾಟಕ

ಕೋರ್ಟ್ ಆದೇಶ ನೀಡಿದರೂ ಅಪಘಾತದ ಪರಿಹಾರ ನೀಡದ್ದಕ್ಕೆ ಬಸ್ ಜಪ್ತಿ.!

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿಕ್ಕೋಡಿ ಘಟಕಕ್ಕೆ ಸೇರಿದ ಬಸ್‌ ಯೊಂದು ಡಿಕ್ಕಿ ಹೊಡೆದಿದ್ದರಿಂದ ಶರಣಬಸು ವಡ್ಡನಗೇರಿ ಎಂಬುವವರು ಮೃತಪಟ್ಟಿದ್ದರು. ಮತ್ತು ಇನ್ನೂಬ್ಬ ವ್ಯಕ್ತಿ ಗಾಯಗೊಂಡಿದ್ದರು. ರಸ್ತೆ ಅಪಘಾತದ ಪರಿಹಾರವನ್ನು ಕೋರ್ಟ್ ಆದೇಶ ನೀಡಿದರೂ ಪರಿಹಾರ ನೀಡದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಅನ್ನು ಶನಿವಾರ ಅಫಜಲಪುರ ಬಸ್ ನಿಲ್ದಾಣದಿಂದ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚವಡಾಪುರ ಗ್ರಾಮದ ಬಳಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಚಿಕ್ಕೋಡಿ ಘಟಕಕ್ಕೆ ಸೇರಿದ ಬಸ್‌ ಯೊಂದು ಡಿಕ್ಕಿ ಹೊಡೆದಿದ್ದರಿಂದ ಶರಣಬಸು ವಡ್ಡನಗೇರಿ ಎಂಬುವವರು ಮೃತಪಟ್ಟಿದ್ದರು. ಮತ್ತು ಇನ್ನೂಬ್ಬ ವ್ಯಕ್ತಿ ಗಾಯಗೊಂಡಿದ್ದರು. ರಸ್ತೆ ಅಪಘಾತದ ಪರಿಹಾರವನ್ನು ಕೋರ್ಟ್ ಆದೇಶ ನೀಡಿದರೂ ಪರಿಹಾರ ನೀಡದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್ ಅನ್ನು ಶನಿವಾರ ಅಫಜಲಪುರ ಬಸ್ ನಿಲ್ದಾಣದಿಂದ ಕೋರ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಅಪಘಾತ ಪರಿಹಾರ ನೀಡದ್ದಕ್ಕೆ ಬಸ್ ಜಪ್ತಿ

ಮೃತ ವ್ಯಕ್ತಿಯ ಕುಟುಂಬದವರು ಪರಿಹಾರಕ್ಕಾಗಿ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಇದೇ ವೇಳೆ ಅಫಜಲಪುರದ ಜೆಎಂಎಫ್‌ಸಿ ಹಿರಿಯ ಸಿವಿಲ್ ನ್ಯಾಯಾಧೀಶರು ₹ 34 ಲಕ್ಷ ಪರಿಹಾರ ಕೊಡುವಂತೆ ಆದೇಶಿಸಿದ್ದರು. 60 ದಿನದೊಳಗಾಗಿ ಪರಿಹಾರ ನೀಡಬೇಕಿತ್ತು. ಆದರೆ 4 ವರ್ಷಗಳಿಂದ ಪರಿಹಾರದ ಹಣ ತುಂಬದೇ ನಿರ್ಲಕ್ಷ್ಯ ವಹಿಸಿದ್ದರಿಂದ ಅಫಜಲಪುರ ಜೆಎಂಎಫ್‌ಸಿ ನ್ಯಾಯಾಲಯ ಬಸ್ ಜಪ್ತಿ ವಾರಂಟ್ ಹೊರಡಿಸಿತ್ತು. ಕೋರ್ಟ್ ಸಿಬ್ಬಂದಿ ಶನಿವಾರ ಅಫಜಲಪುರ ಬಸ್ ನಿಲ್ದಾಣಕ್ಕೆ ಬಂದ ಚಿಕ್ಕೋಡಿ ಘಟಕದ (ಕೆಎ 32 ಎಫ್ 1172) ಬಸ್ ಅನ್ನು ಜಪ್ತಿ ಪಡಿಸಿಕೊಂಡು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.