ಸ್ಪೆಷಲ್ ಸ್ಟೋರಿ

ಕಾರವಾರದಲ್ಲಿ ಬೆಳ್ಳಂಬೆಳಗ್ಗೆ ಉದ್ಯಮಿಯ ಬರ್ಬರ ಹತ್ಯೆ..!

ಬೆಳ್ಳಂಬೆಳಗ್ಗೆ ಕಾರಿನಲ್ಲಿ ಬಂದ ಸುಮಾರು ನಾಲ್ಕು ಮಂದಿ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ದಂಪತಿಗಳ ಮೇಲೆ ಹರಿತವಾದ ವಸ್ತು ಹೊಂದಿರುವ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಮೃತ ವ್ಯಕ್ತಿ ಹಾಗೂ ಅವರ ಹೆಂಡತಿ, ಮಗ ಪೂಣೆಯಲ್ಲಿ ವಾಸವಾಗಿದ್ದರು, ಕಳೆದ ವಾರ ಗ್ರಾಮ ದೇವತೆಯ ಪೂಜೆಗಾಗಿ ಊರಿಗೆ ಬಂದಿದ್ದರು, ಇವತ್ತು ಮರಳಿ ಪೂಣೆಗೆ ಹಿಂದಿರುಗುವುದಾಗಿ ಸ್ನೆಹಿತರಿಗೆ ತಿಳಿಸಿದ್ದರಂತೆ.

ಉತ್ತರಕನ್ನಡ: ಇಂದು ಬೆಳಗಿನ ಜಾವ 5.30ಕ್ಕೆ ಮನೆಗೆ ನುಗ್ಗಿ ಉದ್ಯಮಿಯನ್ನು ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೊಣ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದ ಪುಣೆಯ ಉದ್ಯಮಿ ವಿನಾಯಕ ನಾಯ್ಕ ಯಾನೆ ರಾಜು (58) ಕೊಲೆಯಾದ ದುರ್ದೈವಿ. 

ಬೆಳ್ಳಂಬೆಳಗ್ಗೆ ಕಾರಿನಲ್ಲಿ ಬಂದ ಸುಮಾರು ನಾಲ್ಕು ಮಂದಿ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ ದಂಪತಿಗಳ ಮೇಲೆ ಹರಿತವಾದ ವಸ್ತು ಹೊಂದಿರುವ ರಾಡ್‌ನಿಂದ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹರಿತವಾದ ವಸ್ತುವಿದ್ದ ರಾಡಿನ ಏಟಿಗೆ ವಿನಾಯಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಪತ್ನಿ ವೃಶಾಲಿ (52) ಗಂಭೀರವಾಗಿ ಗಾಯಗೊಂಡಿದ್ದಾರೆ. 

ವೃಶಾಲಿಯವರ ತಲೆ ಹಾಗೂ ಕೈಗೆ ದುಷ್ಕರ್ಮಿಗಳು ರಾಡಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಾಳು ವೃಶಾಲಿ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದು ಬಂದಿದೆ. 
ಕೊಲೆ ಮಾಡಿದ ದುಷ್ಕರ್ಮಿಗಳ ಪತ್ತೆ ಹಾಗೂ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.