ಕರ್ನಾಟಕ

ಫೈನ್ ಹಾಕ್ರೀ..ಕಾರಿನ ಕೀ ಯಾಕೆ ತಗೋತೀರಿ; ಟ್ರಾಫಿಕ್ ಪೊಲೀಸ್​​ಗೆ ಕ್ಯಾಬ್ ಡ್ರೈವರ್ ಅವಾಜ್..!

ಬೆಂಗಳೂರಿನ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.

ಬೆಂಗಳೂರಿನ ಬಾಣಸವಾಡಿ ಮುಖ್ಯ ರಸ್ತೆಯಲ್ಲಿ ಕ್ಯಾಬ್ ಡ್ರೈವರ್ ಹಾಗೂ ಟ್ರಾಫಿಕ್ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಚೆಕ್ಕಿಂಗ್ಗಾಗಿ ನಿಂತಿದ್ದ ಸಂದರ್ಭದಲ್ಲಿ, ಕಾರನ್ನು ನಿಲ್ಲಿಸಿದ ಟ್ರಾಫಿಕ್ ಪೊಲೀಸರು ಬಂದು ಕೀ ಕಸಿದುಕೊಂಡರು. ಜೊತೆಗೆ ನಿನ್ನ ಮೇಲೆ ಯಾವ ರೀತಿ ಕೇಸ್ ಹಾಕಬೇಕು ಎಂದು ನನಗೆ ಗೊತ್ತಿದೆ. ಬಾ ಫೈನ್ ಕಟ್ಟು ಎಂದು ಹೇಳಿದ್ದಾರೆ. ಆಗ ಕೋಪಗೊಂಡ ಕ್ಯಾಬ್ ಚಾಲಕ, ನೀವು ಫೈನ್ ಹಾಕಿ. ಆದ್ರೆ ಕಾರಿನ ಕೀಗೆ ಯಾಕೆ ಕೈ ಹಾಕಿದ್ರಿ ಎಂದು ಗರಂ ಆಗಿ ಪ್ರಶ್ನೆ ಮಾಡಿದ್ದಾರೆ.