ಕರ್ನಾಟಕ

ಈ ಬಾರಿ ಕಲಬುರಗಿಯಲ್ಲಿ ನಡೆಯಲಿದೆ ಸಚಿವ ಸಂಪುಟ ಸಭೆ

ಸೆ.19ರಂದು ಸಂಜೆ 4 ಗಂಟೆಗೆ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಸಚಿವ ಸಂಪುಟಸಭೆ ನಡೆಯಲಿದೆ ಎಂದು ಸರ್ಕಾರದ ಸಚಿವಾಲಯ ತಿಳಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ 19ನೇ ಸಚಿವ ಸಂಪುಟ ಸಭೆ, ಕಲಬುರಗಿಯಲ್ಲಿ ನಡೆಯಲಿದೆ. ಸೆ.19ರಂದು ಸಂಜೆ 4 ಗಂಟೆಗೆ ಕಲಬುರಗಿ ಮಿನಿ ವಿಧಾನಸೌಧದಲ್ಲಿರುವ ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಸಭಾಂಗಣದಲ್ಲಿ ಸಚಿವ ಸಂಪುಟಸಭೆ ನಡೆಯಲಿದೆ ಎಂದು ಸರ್ಕಾರದ ಸಚಿವಾಲಯ ತಿಳಿಸಿದೆ.

ಈ ಮೊದಲು 2013ರಿಂದ 2018ರ ನಡುವೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲೇ ಹೆಚ್ಚಿನ ಸಚಿವ ಸಂಪುಟ ಸಭೆಗಳನ್ನು ನಡೆಸಿದ್ದರು.ಈ ಹಿಂದೆ ದೇವರಾಜು ಅರಸು ಸೇರಿದಂತೆ ಹಲವು ಮುಖ್ಯಮಂತ್ರಿಗಳು ಬೆಂಗಳೂರಿನಿಂದ ಹೊರಗಡೆ ಸಚಿವ ಸಂಪುಟ ಸಭೆ ನಡೆಸಿ ಹೊಸ ಸಂಪ್ರಾದಾಯಕ್ಕೆ ನಾಂದಿ ಹಾಡಿದ್ದರು.

ಇತ್ತೀಚಿನ ದಿನಗಳಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು.ಪ್ರಾದೇಶಿಕ ಅಸಮಾನತೆ ನಿವಾರಣೆ ಸಲುವಾಗಿ ಆಡಳಿತ ವ್ಯವಸ್ಥೆಯನ್ನು ಬೆಂಗಳೂರಿನಿಂದ ಬೇರೆಡೆಗೆ ವಿಕೇಂದ್ರಿಕರಣಗೊಳಿಸು ಕುರಿತು ಹಲವು ಚರ್ಚೆಗಳು ನಡೆದಿವೆ. ಅದರ ಭಾಗವಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದ್ದು, ವರ್ಷಕ್ಕೊಮೆ ವಿಧಾನಮಂಡಳ ಅಧಿವೇಶನ ನಡೆಸಲಾಗುತ್ತಿದೆ