ಸ್ಪೆಷಲ್ ಸ್ಟೋರಿ

ಟವೆಲ್​ ಸುತ್ತಿ ಡ್ಯಾನ್ಸ್ ಮಾಡಿದವಳಿಗೆ ಕೇಸ್​ ?

ಶುಭಾಶಯ ಹೇಳಲು ಹೋಗಿ ಸುದ್ದಿಯಾದ ಮಾಡೆಲ್​

ನವದೆಹಲಿ - 2017 ರ ಮಿಸ್ ಕೋಲ್ಕತ್ತಾ ವಿಜೇತೆ ಸನ್ನತಿ ಮಿತ್ರಾ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ಪುರುಷರ ದಿನಾಚರಣೆಗೆ ಶುಭಾಶಯ ಕೋರಲು ಹಿಂದಿ ಹಾಡಿಗೆ ಲಿಂಪ್ ಸಿಂಕ್ ಮಾಡಿ ಈಕೆ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಇಂಡಿಯಾ ಗೇಟ್ ಬಳಿ ಟವೆಲ್ ಹಾಕಿಕೊಂಡು ಡ್ಯಾನ್ಸ್ ಮಾಡಿರುವುದು ದೊಡ್ಡ ತಲೆನೋವಿಗೆ ಕಾರಣವಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್, ಕಾಮೆಂಟ್ ಗಿಟ್ಟಿಸಿಲು ಹೋಗಿ ದೊಡ್ಡ ವಿವಾದದ ಸುಳಿಗೆ ಸಿಲುಕಿದ್ದಾಳೆ. ನೆಟ್ಟಿಗರೇ ಈಕೆ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ ಮಾಡಿದ್ದಾರೆ.