ಸ್ಪೆಷಲ್ ಸ್ಟೋರಿ

ಮುಂದಿನ 3 ದಿನ ಇಂಟರ್​ನೆಟ್​ ರದ್ದು

ಮಣಿಪುರ ರಾಜಧಾನಿ ಇಂಫಾಲ್​ನಲ್ಲಿ ಮುಂದಿನ 3 ದಿನ ಇಂಟರ್​ನೆಟ್ ರದ್ದು ಮುಂದುವರಿಕೆ ಆಗಲಿದೆ

ಇಂಫಾಲ್ - ಮುಂದಿನ ಮೂರು ದಿನಗಳು ಇಂಟರ್ ನೆಟ್ ರದ್ದು ಮಾಡಲು ಸರ್ಕಾರ ನಿರ್ಧರಿಸಿದೆ. ಜನಾಂಗೀಯ ಸಂಘರ್ಷ ಪೀಡಿತ ಮಣಿಪುರ ರಾಜಧಾನಿಯಲ್ಲಿ ಮುಂದಿನ 3 ದಿನಗಳು ಇಂಟರ್ ನೆಟ್ ಸೇವೆ ಇರಲ್ಲ. ಇಂಫಾಲ್ ಜೊತೆಗೆ 7 ಜಿಲ್ಲೆಗಳಲ್ಲಿ ಹೇರಲಾಗಿದ್ದ ಇಂಟರ್ ನೆಟ್ ಸೇವೆ ರದ್ದು ಹಾಗೇ ಮುಂದುವರೆಯಲಿದೆ. 

ರಾಜ್ಯದಲ್ಲಿ ಹಿಂಸಾಚಾರ ಹೆಚ್ಚಾದ ಸುಳ್ಳು ವದಂತಿ ಹಬ್ಬದಿರಲಿ ಎಂಬ ಕಾರಣಕ್ಕೆ ಸರ್ಕಾರ ಈ ನಿರ್ಧರಕ್ಕೆ ಬಂದಿತು. ನ.16 ರಿಂದ 2 ದಿನಗಳ ಇಂಟರ್ ನೆಟ್ ಸೇವೆ ರದ್ದು ಮಾಡಲಾಗಿತು. ಈಗ ಇದನ್ನ ಮತ್ತೆ 3 ದಿನಗಳು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.