ಕರ್ನಾಟಕ

ವಿಸಿ ನಾಲೆಗೆ ಕಾರು ಬಿದ್ದ ಪ್ರಕರಣ.. ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!

ಸುಮಾರು 15 ಅಡಿ ಆಳಕ್ಕೆ ಬಿದ್ದಿದ್ದ ಕಾರನ್ನ ಕ್ರೇನ್‌ನಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು.. ಆದ್ರೆ ಹಗ್ಗ ಕಟ್‌ ಆಗಿ ಮತ್ತೆ ಕಾರು ಮತ್ತಷ್ಟು ಆಳಕ್ಕೆ ಬಿದ್ದಿದೆ..

ಮಂಡ್ಯ ಜಿಲ್ಲೆಯಲ್ಲಿ ವಿಸಿ ನಾಲೆಗೆ ಕಾರು ಬಿದ್ದಿದ್ದ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.. ಸುಮಾರು 15 ಅಡಿ ಆಳಕ್ಕೆ ಬಿದ್ದಿದ್ದ ಕಾರನ್ನ ಕ್ರೇನ್‌ನಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು.. ಆದ್ರೆ ಹಗ್ಗ ಕಟ್‌ ಆಗಿ ಮತ್ತೆ ಕಾರು ಮತ್ತಷ್ಟು ಆಳಕ್ಕೆ ಬಿದ್ದಿತ್ತು.. ಹರಸಾಹಸಪಟ್ಟು ಅಗ್ನಿಶಾಮಕ ಸಿಬ್ಬಂದಿ ಕಾರನ್ನ ಮೇಲಕ್ಕೆ ಎತ್ತಿದ್ದು 2 ಡೆಡ್‌ಬಾಡಿ ಸಿಕ್ಕಿದ್ದು ಮತ್ತೊಂದು ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.. ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯ ಬಳಿ ವಿಸಿ ನಾಲೆಗೆ ಕಾರು ಬಿದ್ದಿತ್ತು.. ಈ ವೇಳೆ ಕಾರಿನಿಂದ ಹಾರಿದ್ದ ಓರ್ವನ ರಕ್ಷಣೆ ಮಾಡಲಾಗಿತ್ತು.. ಒಟ್ಟು ನಾಲ್ವರು ಕಾರಿನಲ್ಲಿದ್ದರು ಎನ್ನಲಾಗ್ತಿದ್ದು ಮೂವರು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.. ಸದ್ಯ ಓರ್ವನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.. ನೀರು ರಭಸವಾಗಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೊಡಕಾಗಿದೆ.. ಸ್ಥಳದಲ್ಲಿಯೇ ಜಿಲ್ಲಾಧಿಕಾರಿ, ಎಸ್‌ಪಿ ಉಪಸ್ಥಿತಿ ಇದ್ದಾರೆ.. ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ಆಗಮಿಸಿದ್ದು ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಸಿದ್ದಾರೆ.. ಗಾಯಾಳು ನಯಾಜ್‌ಗೆ ಮಂಡ್ಯ ಮಿಮ್ಸ್‌ನಲ್ಲಿ ಚಿಕಿತ್ಸೆ ನೀಡಲಾಗ್ತಿದೆ..