ವೈರಲ್

ಬೆಂಗಳೂರಿನ ಪೋಸ್ಟ್‌ ಆಫೀಸ್‌ಗಳ ಮೇಲೆ ಸಿಸಿಬಿ ದಾಳಿ..!

ಬೆಂಗಳೂರಿನ 3 ಕಡೆಗಳಲ್ಲಿ ಪೋಸ್ಟ್‌ ಆಫೀಸ್‌ಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ.

ಬೆಂಗಳೂರಿನ 3 ಕಡೆಗಳಲ್ಲಿ ಪೋಸ್ಟ್‌ ಆಫೀಸ್‌ಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದ್ದಾರೆ. ವಿದೇಶದಿಂದ ಬರುವ ಕೊರಿಯರ್‌ಗಳಲ್ಲಿ ವಿವಿಧ ಬಗೆಯ ಡ್ರಗ್ಸ್‌ ಸರಬರಾಜು ಹಿನ್ನೆಲೆ ದಾಳಿ ಮಾಡಿದ್ದಾರೆ. ಕಲಾಸಿಪಾಳ್ಯದ ನ್ಯಾಷನಲ್ ಟ್ರಾವಲ್ಸ್ ಏಜೆನ್ಸಿ, ಕೋರಿಯರ್ ಆಫಿಸ್‌ಗಳು, ಟ್ರಾವೆಲ್ ಏಜೆನ್ಸಿಗಳಲ್ಲೂ ಪರಿಶೀಲನೆ ಮಾಡಿದ್ದಾರೆ. ಡಾಗ್‌ ಸ್ಕ್ವಾಡ್‌ನಿಂದ ಪರಿಶೀಲನೆ ಮಾಡಿದ್ದಾರೆ. ನ್ಯೂ ಇಯರ್‌ ಹಿನ್ನೆಲೆ ವಿದೇಶದಿಂದ ಮಾದಕವಸ್ತು ಸಪ್ಲೈ ಮಾಹಿತಿ ಆಧರಿಸಿ ಪರಿಶೀಲನೆ ನಡೆಸಿದ್ದಾರೆ.