ಬಿಗ್‌ಬಾಸ್ ಮಾಜಿ ಸ್ಪರ್ಧಿ, ಆಂಕರ್ ಚೈತ್ರಾ ವಾಸುದೇವನ್ 2ನೇ ಮದುವೆಯ ತಯಾರಿಯಲ್ಲಿದ್ದಾರೆ.. ಲಂಡನ್‌ನಲ್ಲಿ ಫ್ರೀ ವೆಡ್ಡಿಂಗ್ ಶೂಟ್ ನಡೆಸಿದ್ದ ಚೈತ್ರಾ, ಮಾರ್ಚ್‌ನಲ್ಲಿ ಮದುವೆಯಾಗುತ್ತಿರುವುದಾಗಿ ಸುಳಿವು ನೀಡಿದ್ದರು.. ಆದರೆ ಹುಡುಗ ಯಾರು ಅನ್ನೋದನ್ನ ರಿವೀಲ್ ಮಾಡಿರಲಿಲ್ಲ.. ಈಗ ಚೈತ್ರಾ ತಮ್ಮ ಕೈ ಹಿಡಿಯಲಿರುವ ಭಾವಿ ಪತಿಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.. ಮದುವೆಯಾಗುತ್ತಿರುವ ಹುಡುಗನ ಜೊತೆ ಫೋಟೊ ಹಂಚಿಕೊಂಡಿರುವ ಚೈತ್ರಾ,, ಪ್ರೀತಿಯಿಂದಲೇ ತುಂಬಿರುವ ಹೊಸ ಬದುಕಿಗೆ ಕಾಲಿಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ..
ನಿಮಗೆ ಗೊತ್ತಿರಲಿ.. 31 ವರ್ಷದ ಚೈತ್ರಾ ವಾಸುದೇವನ್‌ಗೆ ಇದು ಎರಡನೇ ಮದುವೆ.. ಚೈತ್ರಾ ಈ ಮೊದಲು ಸತ್ಯನಾಯ್ಡು ಎಂಬುವವರ ಕೈ ಹಿಡಿದಿದ್ದರು.. 2017ರಲ್ಲಿ ಚೈತ್ರಾ ವಾಸುದೇವನ್ ಮದುವೆ ನಡೆದಿತ್ತು.. ಆದ್ರೆ ಮದುವೆಯಾಗಿ 5 ವರ್ಷಗಳ ನಂತ್ರ ಅವರು ವಿಚ್ಛೇದನ ಪಡೆದಿದ್ದರು.. 2023ರಲ್ಲಿ ಚೈತ್ರಾ ತಮ್ಮ ವಿಚ್ಛೇದನದ ಬಗ್ಗೆ ಹೇಳಿದ್ದರು.. ಅಲ್ಲದೆ ಹಲವು ಸಂದರ್ಶನದಲ್ಲಿ ಡಿವೋರ್ಸ್‌ಗೆ ಏನು ಕಾರಣ ಎಂಬುದನ್ನು ಹೇಳಿದ್ದರು.. ಸಂಸಾರ ಉಳಿಸಿಕೊಳ್ಳಲು ತುಂಬಾ ಕಷ್ಟಪಟ್ಟಿದ್ದೆ, ಆದ್ರೂ ದಾಂಪತ್ಯ ಅಂತ್ಯವಾಯ್ತು ಎಂದಿದ್ದರು.. ಬದುಕಲ್ಲಿ ನಡೆದ ಕಹಿ ಘಟನೆಗಳಿಗೆ ವಿದಾಯ ಹೇಳಿರುವ ಚೈತ್ರಾ ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದಾರೆ..
ದಾಂಪತ್ಯದಲ್ಲಿ ಬೀಸಿದ ಬಿರುಗಾಳಿಗೆ ಕುಗ್ಗದೆ ಆತ್ಮವಿಶ್ವಾಸದಿಂದ ಚೈತ್ರಾ ವಾಸುದೇವನ್ ತಮ್ಮ ಬದುಕು ಕಟ್ಟಿಕೊಂಡಿದ್ದರು.. ಚಿಕ್ಕ ವಯಸ್ಸಲ್ಲೇ ಕಷ್ಟ-ನೋವುಗಳನ್ನ ನೋಡಿರುವ ಚೈತ್ರಾಗೆ ಇನ್ನೊಂದು ಮದುವೆಯಾಗುವಂತೆ ಚಿತ್ರರಂಗದ ಅನೇಕ ಹಿರಿಯರು ಸಲಹೆ ಕೊಟ್ಟಿದ್ದರು.. ಆದರೂ ತಮ್ಮ ಬದುಕನ್ನು ಒಂದು ಹಂತಕ್ಕೆ ತರಲು ಕಷ್ಟಪಟ್ಟ ಅವರು,, ಈಗ ಮದುವೆಗೆ ಓಕೆ ಅಂದಿದ್ದಾರೆ.. ಅದರಂತೆ ಜಗದೀಪ್ ಎಂಬುವವರನ್ನ ವರಿಸಲು ಸಜ್ಜಾಗಿದ್ದಾರೆ.. ತಮ್ಮ ಜೀವನದಲ್ಲಿ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ..
ಕೆಲ ದಿನಗಳ ಹಿಂದೆ ಚೈತ್ರಾ, ಪ್ಯಾರಿಸ್‌ನಲ್ಲಿ ಪ್ರೀವೆಡ್ಡಿಂಗ್ ಶೂಟ್ ಮಾಡಿಕೊಂಡಿದ್ದರು.. ಅದರ ಭಾವಿ ಪತಿ ಜಗದೀಶ್ ಜೊತೆ ಶಾಪಿಂಗ್ ಕೂಡ ಮಾಡಿದ್ದರು.. ಆದ್ರೆ ಚೈತ್ರಾ ಎಲ್ಲೂ ಜಗದೀಶ್ ಮುಖವನ್ನು ತೋರಿಸಿರಲಿಲ್ಲ.. ಸೋಶಿಯಲ್ ಮೀಡಿಯಾದಲ್ಲಿ ಮದುವೆ ವಿಷ್ಯವನ್ನು ಹಂಚಿಕೊಂಡಿದ್ದ ಚೈತ್ರಾ, ನಾನು ನಿಮ್ಮೊಂದಿಗೆ ಒಂದು ಸಂತೋಷದ ಸುದ್ದಿ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ.. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆ ಇಡುತ್ತಿದ್ದೇನೆ.. ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯನ್ನು , ಆಶೀರ್ವಾದಗಳು ಮತ್ತು ಬೆಂಬಲವನ್ನು ಕೋರುತ್ತೇನೆ ಎಂದಿದ್ದರು.. ಈ ಬೆನ್ನಲ್ಲೇ ಇದೀಗ 2ನೇ ಮದುವೆಯಾಗುತ್ತಿರುವ ಹುಡುಗ ಯಾರೆಂಬುದು ಚೈತ್ರಾ ವಾಸುದೇವನ್ ರಿವೀಲ್ ಮಾಡಿದ್ದಾರೆ.. ಭಾವಿ ಪತಿ ಜೊತೆ ಚೈತ್ರಾ,, ಪಿಂಕ್ ಬಣ್ಣದ ಉಡುಗೆಯಲ್ಲಿ ಮಿಂಚಿದ್ದಾರೆ.. ಇಬ್ಬರ ಕಣ್ ಸಲಿಗೆಯ ಫೋಟೋ ನೋಡಿ ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರಿದ್ದಾರೆ..