ವಿಧಾನಸೌಧ : ರಾಷ್ಟ್ರದ ಆಯವ್ಯಯವನ್ನ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಈ ಬಜೆಟ್‌ಗೆ ಹಲವು ಪ್ರಶಂಸೆ ಬಂದಿವೆ, ಜೊತೆಗೆ ವಿಪಕ್ಷಗಳಿಂದ ಟೀಕೆಗಳು ಬಂದಿವೆ. ರಾಜ್ಯ ಸರ್ಕಾರ ಸಹಜವಾಗಿ ವಿರೋಧ ಮಾಡಿದೆ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಸಿಎಂ ಸೇರಿದಂತೆ ಅನೇಕ ಸಚಿವರು ಕರ್ನಾಟಕ ಏನು ಸಿಕ್ಕಿಲ್ಲ, ಲಾಭ ಇಲ್ಲ.. ಬಜೆಟ್ ಸಪ್ಪೆ ಎಂದು ಹೇಳಿದ್ದಾರೆ. ವಿಪಕ್ಷವಾಗಿ ಪ್ರಶಂಸೆ ಮಾಡಲು ಕಷ್ಟ. ಕಾಂಗ್ರೆಸ್ ನವರಿಗೆ ಏನು ಸಿಕ್ಕಿಲ್ಲ, ಆದರೆ ದೇಶದ ಜನರಿಗೆ ಸಿಕ್ಕಿದೆ. ಸೋಷಿಯಲ್ ಮಿಡಿಯಾದ ತೆಗೆದು ನೋಡಿದ್ರೆ ಕಾಂಗ್ರೆಸ್ ನವರಿಗೆ ಗೊತ್ತಾಗುತ್ತದೆ. ಮುಂದಾಲೋಚನೆ ಅಭಿವೃದ್ಧಿ ಬಜೆಟ್ ಎಂದು ಹೊಗಳಿದ್ದಾರೆ. ಆದ್ರೆ ಸಿದ್ದರಾಮಯ್ಯ ಮಾತ್ರ ಒಂದು ಕೈಯಲ್ಲಿ ಕೊಟ್ಟು, ಇನ್ನೊಂದು ಕೈಯಲ್ಲಿ ತೆಗೆದುಕೊಳ್ತಾರೆ. ಬೇರೆ ಇಲಾಖೆಯಲ್ಲಿರುವ SCP TSP ಹಣ ಗ್ಯಾರಂಟಿಗಳಿಗೆ ಬಳಕೆ ಮಾಡ್ತಾರೆ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.