ಚಂದ್ರಶೇಖರ್ ಸ್ವಾಮೀಜಿ ಮೇಳೆ ಎಫ್‌ಐಆರ್ ದಾಖಲಾದ ವಿಚಾರದ ಬಗ್ಗೆ, ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಈ ಎಫ್‌ಐಆರ್ ಬಗ್ಗೆ ನನಗೆ ಮಾಹಿತಿ ಇಲ್ಲ.ನಮ್ಮ ಸರ್ಕಾರ ಚಂದ್ರಶೇಖರ ಸ್ವಾಮೀಜಿ ಮೇಲೆ ಎಫ್‌ಐಆರ್ ಹಾಕಿ ಅಂತ ಹೇಳಿಲ್ಲ. ಪೊಲೀಸ್ ಇಲಾಖೆಯವರು ಹಾಕಿದ್ರೆ ಅದೇನು ಅಂತಾ ನೋಡ್ತೀವಿ. ಅಶೋಕ್ ಅರಣ್ಯ ಸಚಿವನಾದಾಗಲೇ ಬಾಲಗಂಗಾಧರನಾಥ ಶ್ರೀಗಳ ಮೇಲೆ ಎಫ್‌ಐಆರ್ ಆಗಿತ್ತು.ಅಶೋಕ್ ಹತ್ತಿರ ಕಲಿತು ಕಾಂಗ್ರೆಸ್ ಸರ್ಕಾರ ಮಾಡಬೇಕಿಲ್ಲ. ಎಲ್ಲಾ ಹಿಂದುಳಿದ ವರ್ಗಗಳ ಪರ ಇರುವವರು ಸಿದ್ದರಾಮಯ್ಯ ಅವರು. ಕಾಂಗ್ರೆಸ್‌ನಲ್ಲಿ ಸಾಮಾಜಿಕ ನ್ಯಾಯ ಇದೆ ಎಂದು ಸ್ಪಷ್ಟನೆ ನೀಡಿದ್ದಾರೆ.