ಚಾಮರಾಜನಗರ : ಕಾರಿನೊಳಗೆ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತಯಾದ ಘಟನೆಯೊಂದು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಸ್ವಿಪ್ಟ್ ಕಾರಿನ ಹಿಂಬದಿಯ ಸೀಟ್ ನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಶವ ಕಂಡುಬಂದಿದೆ. ಕಾರಿನ ಡೋರ್‌ನಿಂದ ರಕ್ತ ಕೆಳಗಡೆ ಸುರಿದು ವಾಸನೆ ಬಂದದ್ದನ್ನು ಸಾರ್ವಜನಿಕರು ನೊಡಿದ್ದು, ನಂತರ ಪೊಲೀಸರಿಗೆ ಮಾಹಿತಿ ತಿಳಿಸಿದ್ಧಾರೆ.
ಈ ಸಂಬಂಧ ಪೊಲೀಸರು ಪರಿಸಿಲಿಸಿದಾಗ ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.