ಭೀಮಾತೀರಲ್ಲಿ ಮತ್ತೆ ನೆತ್ತರು ಹರಿದಿದ್ದು, ಕುಖ್ಯಾತ ಚಂದಪ್ಪ ಹರಿಜನ್ ಶಿಷ್ಯ. ಬಾಗಪ್ಪ ಹರಿಜನ್ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ 8:50ರ ಸುಮಾರಿಗೆ ವಿಜಯಪುರದ ಮದಿನಾ ನಗರದಲ್ಲಿ ಬಾಗಪ್ಪ ಹರಿಜನ್ ಊಟ ಮಾಡಿ ವಾಕ್ ಮಾಡುತ್ತಿದ್ದಾಗಲೇ ದುಷ್ಕರ್ಮಿಗಳು ದಾಳಿ ಮಾಡಿ ಕೊಲೆ ಮಾಡಿದ್ದಾರೆ. ಆಟೋದಲ್ಲಿ ಬಂದ ನಾಲ್ಕೈದು ಜನರ ಗ್ಯಾಂಗ್ ತಲ್ವಾರ್, ಕೊಡಲಿಗಳಿಂದ ಭೀಕರ ಹಲ್ಲೆ ನಡೆಸಲಾಗಿದೆ. ಮತ್ತೆ ಬಾಗಪ್ಪ ಉಸಿರಾಡುತ್ತಿರುವುದನ್ನ ಕಂಡ ದುಷ್ಕರ್ಮಿಗಳು ಮತ್ತೆರೆಡು ಗುಂಡು ಹಾರಿಸಿ ಬಾಗಪ್ಪನನ್ನ ಕೊಲೆ ಮಾಡಿದ್ದಾರೆ. ದಶಕಗಳ ಹಿಂದೆ ಕಲಬುರಗಿ ಮತ್ತು ವಿಜಯಪುರದ ಭೀಮಾತೀರದಲ್ಲಿ ರಕ್ತದೋಕುಳಿಯನ್ನೇ ಹರಿಸಿದ್ದ ಬಾಗಪ್ಪ ಹರಿಜನ್ ಹಿಂದೆ ಹತ್ತು-ಹಲವು ಅಪರಾಧ ಪ್ರಕರಣಗಳಿವೆ.
ಸದ್ಯ ಘಟನೆ ಸ್ಥಳಕ್ಕೆ ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ಶಂಕರ್ ಮಾರಿಹಾಳ, ಎಎಸ್ಪಿ ರಾಮನಗೌಡ ಹಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಡಾಗ್ ಸ್ಕ್ವಾಡ್, ವಿಧಿ ವಿಜ್ಞಾನ ವಿಭಾಗದ ತಜ್ಞರ ಭೇಟಿ ನೀಡಿದ್ದಾರೆ.
ಬಾಗಪ್ಪ ಹರಿಜನ್ ಹಿಂದಿರುವ ಅಪರಾಧ ಪ್ರಕರಣಗಳು :
- 2000 ರಲ್ಲಿ ಪೊಲೀಸರ ಮೇಲೆ ಫೈರಿಂಗ್
- 1999 ರಲ್ಲಿ ಆಲಮೇಲದಲ್ಲಿ ನಡೆದ ಕೊಲೆ ಪ್ರಕರಣ
- 1998 ರಲ್ಲಿ ಕಲಬುರಗಿ ಜಿಲ್ಲೆ ಆಳಂದನಲ್ಲಿ ನಡೆದ ಜೋಡಿ ಕೊಲೆ ಪ್ರಕರಣ
- 1997 ರಲ್ಲಿ ಚಡಚಣದಲ್ಲಿ ನಡೆದ ಕೊಲೆ ಪ್ರಕರಣ
- 2001 ರಲ್ಲಿ ಕೋಡ್ ಕೊಲೆ ಪ್ರಕರಣ
- 2003 ರಲ್ಲಿ ಕಲಬುರಗಿಯ ಅಫಜಲಪೂರದ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ