ದೇಶ

ಚಂದ್ರಿಕಾ ಟಂಡನ್‌ಗೆ ಒಲಿದ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ

ಚಂದ್ರಿಕಾ ಸೇರಿ ಭಾರತೀಯ ಮೂಲದ ಹಲವರು ಗ್ರ್ಯಾಮಿ-2025 ನಾಮಿನೇಷನ್‌ನಲ್ಲಿ ಇದ್ದರು. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ರಿಕಿ ಕೇಜ್, ಅನುಷ್ಕಾ ಶಂಕರ್ ಮತ್ತು ರಾಧಿಕಾ ವೆಕಾರಿಯಾ ತಂಡ ಚಂದ್ರಿಕಾ ಟಂಡನ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ ಚಂದ್ರಿಕಾ ಟಂಡನ್ ತಂಡಕ್ಕೆ ಪ್ರಶಸ್ತಿ ಲಭಿಸಿದೆ.

2024-25ನೇ ಸಾಲಿನ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಘೋಷಣೆಯಾಗಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತ ಮೂಲದ ಮ್ಯೂಸಿಕ್‌ ಡೈರೆಕ್ಟರ್‌ ಚಂದ್ರಿಕಾ ಟಂಡನ್ ಅವರ ‘ತ್ರಿವೇಣಿ’ ಎಂಬ ಮ್ಯೂಸಿಕ್ ಆಲ್ಬಂ ಗ್ರ್ಯಾಮಿ ಗೌರವ ಒಲಿದಿದೆ. ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಚಂದ್ರಿಕಾ ಟಂಡನ್ ಸತ್ಕರಿಸಲಾಗಿದೆ. ಕಳೆದ ವರ್ಷ 30 ಆಗಸ್ಟ್ 2024ರಂದು ಮಾರುಕಟ್ಟೆಗೆ ಬಂದಿದ್ದ ತ್ರಿವೇಣಿ ಆಲ್ಬಂ, ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರೀ ಜನಮನ್ನಣೆ ಗಳಿಸಿದೆ. ಭಾರತದ ಪರಂಪರೆ ಹಾಗೂ ಪಾಶ್ಚಿಮಾತ್ಯ ಸಂಗೀತಗಳ ಸಮ್ಮಿಶ್ರಣದಂತಿರುವ ಈ ಆಲ್ಬಂನಲ್ಲಿ ಒಟ್ಟು 7 ಹಾಡುಗಳಿದ್ದು ಅವೆಲ್ಲವೂ ಕೇಳುಗರಿಗೆ ಮುದಾ ನೀಡುತ್ತವೆ. ಚಂದ್ರಿಕಾ ಸೇರಿ ಭಾರತೀಯ ಮೂಲದ ಹಲವರು ಗ್ರ್ಯಾಮಿ-2025 ನಾಮಿನೇಷನ್‌ನಲ್ಲಿ ಇದ್ದರು. ಆಂಬಿಯೆಂಟ್ ಅಥವಾ ಚಾಂಟ್ ಆಲ್ಬಂ ವಿಭಾಗದಲ್ಲಿ ರಿಕಿ ಕೇಜ್, ಅನುಷ್ಕಾ ಶಂಕರ್ ಮತ್ತು ರಾಧಿಕಾ ವೆಕಾರಿಯಾ ತಂಡ ಚಂದ್ರಿಕಾ ಟಂಡನ್ ತಂಡಕ್ಕೆ ಪ್ರಬಲ ಪೈಪೋಟಿ ನೀಡಿದ್ದರು. ಅಂತಿಮವಾಗಿ ಚಂದ್ರಿಕಾ ಟಂಡನ್  ತಂಡಕ್ಕೆ ಪ್ರಶಸ್ತಿ ಲಭಿಸಿದೆ.