ಕರ್ನಾಟಕ

ಸಂಜೆ ವೇಳೆಗೆ CPY ಕಾಂಗ್ರೆಸ್ ಸೇರೋದು ಪಕ್ಕಾ..? ಮುನ್ಸೂಚನೆ ನೀಡಿದ ಸಿಎಂ

ಚನ್ನಪಟ್ಟಣ ಬೈ ಎಲೆಕ್ಷನ್ ಕಣದಲ್ಲಿ ಪೈಪೋಟಿ ರಂಗೇರಿದೆ. ಬಹುತೇಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸಾಧ್ಯತೆಗಳನ್ನ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸೂಚಿಸಿದಂತೆ ಭಾಸವಾಗುತ್ತಿದೆ. ಎದುರಾಳಿ NDA ಕೂಟದಲ್ಲಿ ಗುರುತಿಸಿಕೊಂಡಿದ್ದ ಸಿಪಿವೈ, ನೆನ್ನೆಯಷ್ಟೇ ವಿಧಾನಪರಿಷತ್ ಸ್ಥಾನಕ್ಕೆ ಅಧಿಕೃತ ರಾಜೀನಾಮೆಯನ್ನ ನೀಡಿದ್ದಾರೆ.

ಮೈಸೂರು : ಸಿಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. ಇಂದು ಸಂಜೆ ವೇಳೆಗೆ ಅವರು ತಮ್ಮ ನಿರ್ಧಾರವನ್ನ ಪ್ರಕಟಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪ ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ. ಇಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆ ಇದಕ್ಕೆ ಪುಷ್ಠಿ ನೀಡುತ್ತಿದೆ. 

ನಿನ್ನೆಯಷ್ಟೇ ಪರಿಷತ್ ಸದ್ಯಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ವತಂತ್ರ ಅಭ್ಯರ್ಥಿಯಾಗಿ ಚನ್ನಪಟ್ಟಣದಿಂದ ಕಣಕ್ಕಿಳಿಯುವ ಬಗ್ಗೆ ಸಿಪಿವೈ ತಿಳಿಸಿದ್ದರು. ಆದ್ರೆ ಸಿಎಂ ಮೈಸೂರಿನಲ್ಲಿ ಆಡಿರುವ ಮಾತು ಸಿಪಿವೈ ಕಾಂಗ್ರೆಸ್ ನೀಡುವ ಬಗ್ಗೆ ಮುನ್ಸೂಚನೆಯನ್ನ ನೀಡುವಂತಿದೆ. ಹೌದು, ಸಂಜೆಯೇ ಸೈನಿಕ ಕಾಂಗ್ರೆಸ್ ಗೆ ಬಲಗಾಲಿಡಲಿದ್ದು, ಮೈತ್ರಿಗೆ ಸಡ್ಡು ಹೊಡೆದು ಚನ್ನಪಟ್ಟಣ ಕಣಕ್ಕಿಳಿಯೋದು ಬಹುತೇಕ ಪಕ್ಕಾ ಆಗಿದೆ.

ಸಿಎಂ ಹೇಳಿದ್ದೇನು?

ಬಹುತೇಕ ಸಿ.ಪಿ ಯೋಗೇಶ್ವರ್ ಕಾಂಗ್ರೆಸ್ ಸೇರುವ ಸಾಧ್ಯತೆಗಳನ್ನ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸೂಚಿಸಿದಂತೆ ಭಾಸವಾಗುತ್ತಿದೆ. ಯಾಕೆಂದರೆ ಮಯಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಯಾರೇ ಬಂದ್ರು ಪಕ್ಷಕ್ಕೆ ಸ್ವಾಗತ ಎಂದು ಹೇಳಿದ್ದಾರೆ. ಈ ಮೂಲಕ ಬಹಿರಂಗ ಆಹ್ವಾನ ನೀಡಿದ್ದು,  ಸೈನಿಕನ ಕಾಂಗ್ರೆಸ್ ಸೇರ್ಪಡೆಗೆ ಗ್ರಿನ್ ನಿಗ್ನಲ್ ನೀಡಿದ್ದಾರೆ.