ಕರ್ನಾಟಕ

ಚನ್ನಪಟ್ಟಣ ಬೈ ಎಲೆಕ್ಷನ್​: ಅಭ್ಯರ್ಥಿ ವಿಚಾರದಲ್ಲಿ ಡಿಕೆಶಿಗೆ ಟಾಂಗ್ ಕೊಟ್ಟ ಜಮೀರ್ ಅಹ್ಮದ್.! ಕಾಂಗ್ರೆಸ್​ ಗೆ ಹೊಸ ತಲೆ ನೋವು?

ಡಿಕೆಶಿ ಚನ್ನಪಟ್ಟಣಕ್ಕೆ ಹೋದಾಗಲೆಲ್ಲಾ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ, ಇದಕ್ಕೆ ವಸತಿ ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡುವ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ನೀಡಿದ್ದಾರೆ. ನಾನೇ ಅಭ್ಯರ್ಥಿ ಎಂದ ಡಿಕೆಶಿಗೆ, ನಮ್ಮದು ಏನಿದ್ದರೂ ಹೈಕಮಾಂಡ್ ಪಕ್ಷ ಎಂದಿದ್ದಾರೆ.

ಹುಬ್ಬಳ್ಳಿ / ರಾಮನಗರ :  ಸದ್ಯ ರಾಜ್ಯ ರಾಜಕೀಯದಲ್ಲಿ ಬಹಳ ಚರ್ಚೆ ಆಗುತ್ತಿರುವುದು ಚನ್ನಪಟ್ಟಣ ಬೈ ಎಲೆಕ್ಷನ್ ಟಿಕೆಟ್ ವಿಚಾರ. ಚನ್ನಪಟ್ಟಣ ಅಸೆಂಬ್ಲಿ ಕ್ಷೇತ್ರಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ ನಂತರ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರಂತರವಾಗಿ  ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಕಾರ್ಯಕರ್ತರು ಮತ್ತು ಮತದಾರರ ಜೊತೆಗೆ ಮಾತುಕತೆ ನಡೆಸುತ್ತಿದ್ದಾರೆ.

ಜೊತೆಗೆ ಈ ಮಧ್ಯ ಡಿಕೆಶಿ ಚನ್ನಪಟ್ಟಣಕ್ಕೆ  ಹೋದಾಗಲೆಲ್ಲಾ ನಾನೇ ಅಭ್ಯರ್ಥಿ ಎಂದು  ಹೇಳುತ್ತಿದ್ದಾರೆ, ಇದಕ್ಕೆ ವಸತಿ ಖಾತೆಯ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡುವ ಹೇಳಿಕೆಯನ್ನು ಹುಬ್ಬಳ್ಳಿಯಲ್ಲಿ ನೀಡಿದ್ದಾರೆ. ನಾನೇ ಅಭ್ಯರ್ಥಿ ಎಂದ ಡಿಕೆಶಿಗೆ, ನಮ್ಮದು ಏನಿದ್ದರೂ ಹೈಕಮಾಂಡ್ ಪಕ್ಷ ಎಂದಿದ್ದಾರೆ. ಇದರ ಜೊತೆಗೆ, ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎನ್ನುವ ಬೇಡಿಕೆಯನ್ನು ಇಡುವ ಮೂಲಕ, ಉಪ ಮುಖ್ಯಮಂತ್ರಿಗಳಿಗೆ ಹೊಸ ತಲೆನೋವು ತಂದಿಟ್ಟಿದ್ದಾರೆ. ಜೊತೆಗೆ, ಕೇಂದ್ರ ಸಚಿವ ಕುಮಾರಸ್ವಾಮಿಗೂ ಸವಾಲು ಹಾಕಿದ್ದಾರೆ.

ಇಗಾಗಲೇ ಮೈತ್ರಿ ಪಕ್ಷದ ಅಭ್ಯರ್ಥಿಯ ವಿಚಾರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಲ್ಲಿ ದಿನಕ್ಕೊಂದು ಗೊಂದಲವಿದೆ. ಆದರೆ, ಕಾಂಗ್ರೆಸ್ಸಿನಲ್ಲಿ ಅಂತಹ ಏನೂ ಸಮಸ್ಯೆ ಇಲ್ಲ ಎನ್ನುವ ಹೊತ್ತಿಗೆ, ಜಮೀರ್ ಹೇಳಿಕೆ ಮಹತ್ವವನ್ನು ಪಡೆದುಕೊಂಡಿದೆ. ಜೊತೆಗೆ, ಅಭ್ಯರ್ಥಿ ಆಯ್ಕೆ ಏನಿದ್ದರೂ, ಹೈಕಮಾಂಡೇ ಹೊರತು ರಾಜ್ಯ ನಾಯಕರಲ್ಲ ಎನ್ನುವ ಧಾಟಿಯಲ್ಲಿ ಜಮೀರ್ ಮಾತನಾಡಿದ್ದಾರೆ.