ಕರ್ನಾಟಕ

ರಂಗೇರಿದ ಚನ್ನಪಟ್ಟಣ ಬೈ ಎಲೆಕ್ಷನ್.. ಬಿಜೆಪಿ-ಜೆಡಿಎಸ್ ನಡುವೆ ಗಣಪತಿ ಪಾಲಿಟಿಕ್ಸ್

ಚನ್ನಪಟ್ಟಣದಲ್ಲಿ ಈಗ ಬಿಜೆಪಿ-ಜೆಡಿಎಸ್ ನಡುವೆಯೇ ಗಣಪತಿ ಪಾಲಿಟಿಕ್ಸ್ ಶುರುವಾಗಿದೆ. ಎರಡೂ ಪಕ್ಷಗಳಿಂದ ಪ್ರತ್ಯೇಕ ಗಣಪತಿ ಮೂರ್ತಿ ವಿತರಣೆ ಮಾಡಲಾಗುತ್ತಿದೆ. ಅಂದರೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಗಣಪತಿ ವಿತರಣೆ ಮಾಡಲಾಗುತ್ತಿದೆ.

ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆ ದಿನೇ ದಿನೆ ರಂಗೇರುತ್ತಿದೆ. ಚನ್ನಪಟ್ಟಣದಲ್ಲಿ ಈಗ ಬಿಜೆಪಿ-ಜೆಡಿಎಸ್ ನಡುವೆಯೇ ಗಣಪತಿ ಪಾಲಿಟಿಕ್ಸ್ ಶುರುವಾಗಿದೆ. ಎರಡೂ ಪಕ್ಷಗಳಿಂದ ಪ್ರತ್ಯೇಕ ಗಣಪತಿ ಮೂರ್ತಿ ವಿತರಣೆ ಮಾಡಲಾಗುತ್ತಿದೆ. ಕ್ಷೇತ್ರದ ಪ್ರತಿ ಗ್ರಾಮಕ್ಕೂ ಪ್ರತ್ಯೇಕ ಗಣೇಶ ಮೂರ್ತಿ ವಿತರಣೆ ಮಾಡಲಾಗುತ್ತಿದೆ. ಅಂದರೆ ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹಾಗೂ ಜೆಡಿಎಸ್ ನಿಂದ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಗಣಪತಿ ವಿತರಣೆ ಮಾಡಲಾಗುತ್ತಿದೆ.

ಬೆಳಗ್ಗೆ 11:30ಕ್ಕೆ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಜಯಮುತ್ತು ಅವರಿಂದ ಗಣೇಶ ಮೂರ್ತಿ ವಿತರಣೆ ಮಾಡಲಾಗುತ್ತದೆ. ಮಧ್ಯಾಹ್ನ 12:30ಕ್ಕೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ಬಿಜೆಪಿ ಮುಖಂಡರಿಂದ ಗಣಪತಿ ವಿತರಣೆ ಮಾಡಲಾಗುತ್ತದೆ. ಕ್ಷೇತ್ರದ ಮತದಾರರ ಮನವೊಲಿಕೆಗೆ ಎರಡೂ ಪಕ್ಷಗಳಿಂದ ತಂತ್ರ ಹೆಣೆಯುತ್ತಿದ್ದು, ಪೊಲೀಸ್ ಇಲಾಖೆ ಅನುಮತಿ ಪತ್ರ ಇದ್ದವರಿಗೆ ಮಾತ್ರ ಮೂರ್ತಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಎರಡೂ ಪಕ್ಷಗಳ ನಡುವೆ ಪೈಪೋಟಿ ಶುರುವಾಗಿದೆ. ಕ್ಷೇತ್ರದ ಮತದಾರರ ಮನಗೆಲ್ಲಲು ನಾನಾ ತಂತ್ರಗಾರಿಕೆ ಮಾಡಲಾಗುತ್ತಿದೆ.