ನಿಖಿಲ್ ನ ಹಿಂದಿಕ್ಕಿದ ಸಿಪಿವೈ
ಚನ್ನಪಟ್ಟಣ ಉಪಸಮರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿನ ಫೈಟ್ ನಡೆಯುತ್ತಿದೆ. ಪ್ರತಿ ಹಂತದಲ್ಲೂ ಹಾವು-ಏಣಿ ಆಟ ನಡೆಯತ್ತಿದ್ದು, 6ನೇ ಸುತ್ತಿನವರೆಗೂ ಮುನ್ನಡೆ ಇದ್ದ ನಿಖಿಲ್ ಇದೀಗ ಕಾಂಗ್ರೆಸ್ ಅಭ್ಯರ್ಥಿ ಸಿಪಿವೈ ವಿರುದ್ಧ ಸೋತಿದ್ದಾರೆ. 25 ಸಾವಿರದ 515 ಮತಗಳ ಅಂತರದಲ್ಲಿ ಸಿಪಿವೈ ಗೆಲುವು ಸಾಧಿಸಿದ್ದಾರೆ.
ಇಬ್ಬರ ನಡುವೆ ಹಾವು-ಏಣಿ ಆಟ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿಪಿವೈ ನಡುವೆ ಹಾವು-ಏಣಿ ಆಟ ನಡೆಯುತ್ತಿದೆ. ಒಮ್ಮೆ ನಿಖಿಲ್ ಮತ್ತೊಮ್ಮೆ ಸಿ.ಪಿ.ಯೋಗೇಶ್ವರ್ ಮುನ್ನಡೆ ಸಾಧಿಸುತ್ತಿದ್ದಾರೆ.
ಸಿ.ಪಿ.ಯೋಗೇಶ್ವರ್ ಮುನ್ನಡೆ
ಚನ್ನಪಟ್ಟಣದಲ್ಲಿ ಮೊದಲನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 435 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನ ಮತ ಎಣಿಕೆಯಲ್ಲಿ ಸಿ.ಪಿ.ಯೋಗೇಶ್ವರ್ ಮುನ್ನಡೆ ಸಾಧಿಸಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮುನ್ನಡೆ
3ನೇ ಸುತ್ತಿನ ಮತ ಎಣಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ 847 ಮತಗಳ ಮುನ್ನಡೆ ಸಾಧಿಸಿದ್ದಾರೆ.
4ನೇ ಸುತ್ತಿನ ಮತ ಎಣಿಕೆಯಲ್ಲೂ ನಿಖಿಲ್ ಕುಮಾರಸ್ವಾಮಿ 1151 ಮತಗಳ ಮುನ್ನಡೆ ಸಾಧಿಸಿದ್ದಾರೆ
5ನೇ ಸುತ್ತಿನಲ್ಲೂ ನಿಖಿಲ್ ಕುಮಾರಸ್ವಾಮಿ 1,302 ಮತಗಳ ಮುನ್ನಡೆ ಸಾಧಿಸಿದ್ದಾರೆ.
6ನೇ ಸುತ್ತಿನಲ್ಲೂ ನಿಖಿಲ್ ಕುಮಾರಸ್ವಾಮಿ 780 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಮತ್ತೆ ಮುನ್ನಡೆ
7ನೇ ಸುತ್ತಿನ ಮತ ಎಣಿಕೆಯಲ್ಲಿ ಸಿ.ಪಿ.ಯೋಗೇಶ್ವರ್ 4742 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.
8ನೇ ಸುತ್ತಿನ ಮತ ಎಣಿಕೆಯಲ್ಲಿ ಸಿ.ಪಿ.ಯೋಗೇಶ್ವರ್ 11,178 ಮತಗಳ ಮುನ್ನಡೆಯಲ್ಲಿದ್ದಾರೆ.
9ನೇ ಸುತ್ತಿ ಮತ ಎಣಿಕೆಯಲ್ಲೂ ಸಿ.ಪಿ.ಯೋಗೇಶ್ವರ್ 15 ಸಾವಿರ ಮತಗಳ ಮುನ್ನಡೆಯಲ್ಲಿದ್ದಾರೆ.
11ನೇ ಸುತ್ತಿನ ಮತ ಎಣಿಕೆ.. 20 ಸಾವಿರ ಮತಗಳಿದ ಸಿ.ಪಿ ಯೋಗೇಶ್ವರ್ ಗೆ ಭಾರಿ ಮುನ್ನಡೆ.
12 ಸುತ್ತಿನ ಮತ ಎಣಿಕೆಯಲ್ಲಿ 21 ಸಾವಿರ ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
13ನೇ ಸುತ್ತಿನ ಮತ ಎಣಿಕೆಯಲ್ಲಿ 22548 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
14 ಸುತ್ತಿನ ಮತ ಎಣಿಕೆಯಲ್ಲಿ 24310 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
15ನೇ ಸುತ್ತಿನ ಮತ ಎಣಿಕೆಯಲ್ಲಿ 25,026 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
16ನೇ ಸುತ್ತಿನ ಮತ ಎಣಿಕೆಯಲ್ಲಿ 24,889 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
17ನೇ ಸುತ್ತಿನ ಮತ ಎಣಿಕೆಯಲ್ಲಿ 25,903 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.
18ನೇ ಸುತ್ತಿನ ಮತ ಎಣಿಕೆಯಲ್ಲಿ 26,620 ಮತಗಳಿಂದ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.