ಉಪಚುನಾವಣೆಯಲ್ಲಿ ಹೈವೋಲ್ಟೇಜ್ ಕಣವಾಗಿದ್ದ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಗೆದ್ದು ಬೀಗಿದೆ. ಮನೆ ಮಗನ ಗೆಲುವಿಗಾಗಿ ಓಡಾಡಿದಂತೆ, ಡಿಕೆ ಬ್ರದರ್ಸ್ ಶ್ರಮ ಪಟ್ಟಿದ್ದಾರೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಿಪಿವೈ ಗೆಲುವಿಗಾಗಿ ಪಣ ತೊಟ್ಟು ನಿಂತಿದ್ದರು. ಇದೊಂಥರಾ ಡಿಕೆ ಬ್ರದರ್ಸ್ ಪಾಲಿಗೆ ಪ್ರತಿಷ್ಠೆ ಅಂದ್ರೂ ತಪ್ಪಾಗಲ್ಲ.
ಅಷ್ಟೇ ಅಲ್ಲ ಇದು ಸೇಡಿನ ಸಮರದ ಗೆಲುವು ಅಂತಲೂ ಹೇಳಬಹುದೇನೋ..ಯಾಕಂದ್ರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ಡಿ.ಕೆ ಸುರೇಶ್ ಗೆ ಆಗಿದ್ದು ಅಂತಿಂಥಾ ನೋವಲ್ಲ. ತಮ್ಮನ ಸೋಲಿನಿಂದ ಕನಕಪುರ ಬಂಡೆಯೇ ಕರಗಿಹೋಗಿತ್ತು. ಇದೇ ಟೈಮಲ್ಲಿ ಉಪಚುನಾವಣೆಯ ಮೇಲೆ ದೃಷ್ಟಿ ಬಿಟ್ಟರು. ಇದನ್ನೇ ಸವಾಲಾಗಿ ತೆಗೆದುಕೊಂಡಿದ್ದ ಡಿಕೆ ಸಹೋದರರು, ಅಂದಿನಿಂದಲೇ ಚನ್ನಪಟ್ಟಣ ವಶಕ್ಕೆ ತಂತ್ರ ರೂಪಿಸಿದ್ದರು. ಖುದ್ದು ಜೆಡಿಎಸ್ ಒಕ್ಕಲಿಗ ನಾಯಕರನ್ನೂ ಸದ್ದಿಲ್ಲದೇ ಸೆಳೆದಿದ್ದರು. ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಕರೆತಂದು ಕಾಂಗ್ರೆಸ್ ನಿಂದ ನಿಲ್ಲಿಸಿದ್ರು. ನಮ್ಮದೇ ಸರ್ಕಾರ ಇದೆ ಎಂದು ಒತ್ತಿ ಹೇಳಿದ್ರು. ಅಲ್ಲಿಂದ ಆಟ ಶುರು ಮಾಡಿ ಕೊನೆಗೂ ಸೈನಿಕನನ್ನ ಚನ್ನಪಟ್ಟಣದ ಅಧಿಪತಿಯನ್ನಾಗಿ ಮಾಡಿದ್ರು.