ಅಗ್ಗದ ಬೆಲೆಯ ಫೋನ್ ಗಾಗಿ ಕಾದಿದ್ದೀರ? ಹಣ ಕಡಿಮೆ ಇದ್ರೂ ಮೊಬೈಲ್ ಫೀಚರ್ಸ್ ಚನ್ನಾಗಿರಬೇಕಾ.. ಹಾಗಾದ್ರೆ ಡೋಂಟ್ ವರಿ. ಯಾಕಂದ್ರೆ ಪೊಕೊ ಕಂಪನಿ ಹೊಸ ಫೋನ್ ಒಂದನ್ನ ಟೆಕ್ ಮಾರುಕಟ್ಟೆಗೆ ತರಲು ಸಜ್ಜಾಗಿದ್ದಾರೆ.
ಹೌದು, ಪೊಕೊ C75 5G (POCO C75 5G) ಮೊಬೈಲ್ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಇದೇ ಡಿಸೆಂಬರ್ 17ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಪೊಕೊ 5G ಕಾಲಿಡಲಿದೆ. ಈಗಾಗಲೇ ಲೀಕ್ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿರುವ ಪೋಕೋ ಮೊಬೈಲ್ ಮೇಲೆ ಮತ್ತಷ್ಟು ನಿರೀಕ್ಷೆಗಳು ಹೆಚ್ಚಾಗಿವೆ.
ಪೊಕೊ ಕಂಪನಿಯು ಪೊಕೊ C75 5G ಮೊಬೈಲ್ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ರೆಡಿಯಾಗಿದೆ. ಕೈಗೆಟುಕುವ ದರದಲ್ಲಿ ಬರುತ್ತಿರುವ ಈ ಫೋನ್ ಬಗ್ಗೆ ಕೆಲವರಿಗೆ ಸಾಕಷ್ಟು ಗೊಂದಲಗಳಿರುತ್ತೆ. ಆದ್ರೆ ಗೊಂದಲಕ್ಕೊಳಗಾಗೋದು ಬೇಡ.. ಈಲ್ಲಿದೆ ಪೊಕೊ C75 5G ಬಗ್ಗೆ ಸಂಪೂರ್ಣ ಮಾಹಿತಿ.
ಪೊಕೊ C75 5G ಕ್ಯಾಮರಾ ಕ್ವಾಲಿಟಿ ಹೇಗಿರುತ್ತೆ?
ಹೊಸದಾಗಿ ಮಾರುಕಟ್ಟೆಗೆ ಕಾಲಿಡುತ್ತಿರುವ ಈ ಫೋನ್ ಆಕರ್ಷಕ ಕ್ಯಾಮರಾ ಕ್ವಾಲಿಟಿಯನ್ನ ಒಳಗೊಂಡಿದೆ. ಈ ಪೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೌಲಭ್ಯ ಹೊಂದಿದ್ದು, 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನ ಹೊಂದಿರಲಿದೆ.
ಪೊಕೊ C75 5G ಬ್ಯಾಟರಿ ಬ್ಯಾಕಪ್ ಹೇಗಿರತ್ತೆ?
ಇನ್ನೂ ಪೊಕೊ C75 5G ಬ್ಯಾಟರಿ ಬಗ್ಗೆ ಮಾತನಾಡೋದೇ ಬೇಡ. ಯಾಕೆಂದರೆ, 5160mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಹೊಂದಿದ್ದು, ಒಂದು ಬಾರಿ ಚಾರ್ಜ್ ಮಾಡಿದ್ರೆ, ಅಷ್ಟು ಸುಲಭದಲ್ಲಿ ಚಾರ್ಜ ಖಾಲಿಯಾಗುವ ಮಾತೇ ಇಲ್ಲ.
ಪೊಕೊ C75 5G ಡಿಸ್ ಪ್ಲೇ ಹೇಗಿರಬಹುದು ?
ಹೊಸ ಪೋನ್ ತೆಗೆದುಕೊಳ್ಳುವ ನಮ್ಮ ಗ್ರಾಹಕರಿಗೆ ಪ್ರತಿಯೊಂದು ಅಂಶವೂ ಮುಖ್ಯವಾಗಿರುತ್ತದೆ. ಹೌದು ಗ್ರಾಹಕರಿಗೆ ಫೋನ್ ಡಿಸ್ ಪ್ಲೇ ಹೇಗಿರುತ್ತೆ ಎಂಬ ಕುತೂಹಲ ಇದ್ದೇ ಇರುತ್ತೆ. ಈ ಪೋನ್ ಉತ್ತಮ ಡಿಸ್ ಪ್ಲೇ ಕ್ವಾಲಿಟಿ ಹೊಂದಿದ್ದು, ಉತ್ತಮ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವಿದೆ. 90Hz ರಿಫ್ರೆಶ್ ರೇಟ್ ಡಿಸ್ ಪ್ಲೇ ಸೌಲಭ್ಯ ಸಹ ಇದರಲ್ಲಿರಬಹುದು ಎಂದು ಹೇಳಲಾಗುತ್ತಿದೆ.
ಇನ್ನೂ ಮೆಮೊರಿ ವಿಚಾರಕ್ಕೆ ಬಂದರೆ 8GB RAM ಇರಲಿದ್ದು, 4GB ಟರ್ಬೋ RAM ಕೂಡ ಇದೆ.