ವೈರಲ್

ಆದಾಯಕ್ಕಾಗಿ ಸಾಕಿದ್ದ ಕೋಳಿಗಳನ್ನು ಕೊಂದು ಅಟ್ಟಹಾಸ..!

ಕಿಡಿಗೇಡಿಗಳ್ಯಾರೋ ಬಡ ಕೂಲಿ ಕಾರ್ಮಿಕರು ಸಾಕಿದ್ದ ನಾಟಿ ಕೋಳಿಗಳಿಗೆ ವಿಷ ಉಣಿಸಿ ಕೊಂದಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾದಿಗೆ ಗ್ರಾಮದಲ್ಲಿ ನಡೆದಿದೆ.

ಕಿಡಿಗೇಡಿಗಳ್ಯಾರೋ ಬಡ ಕೂಲಿ ಕಾರ್ಮಿಕರು ಸಾಕಿದ್ದ ನಾಟಿ ಕೋಳಿಗಳಿಗೆ ವಿಷ ಉಣಿಸಿ ಕೊಂದಿರುವ ಘಟನೆ, ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹಾದಿಗೆ ಗ್ರಾಮದಲ್ಲಿ ನಡೆದಿದೆ. ಅಲ್ಪ ಸ್ವಲ್ಪ ಆದಾಯ ಬರಲೆಂದು ಗ್ರಾಮದ ರವಿ ಹಾಗೂ ಇತರರು, ನಾಟಿ ಕೋಳಿ ಸಾಕಿದ್ದರು. ಕೋಳಿಯನ್ನು ಹೊರಗೆ ಬಿಟ್ಟು ಕೆಲಸಕ್ಕೆ ತೆರಳಿದ್ದು, ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಕೋಳಿಗಳು ಸತ್ತು ಬಿದ್ದಿರುವುದು ಕಂಡು ಶಾಕ್‌ ಆಗಿದ್ದಾರೆ. 

ಕೋಳಿಗಳಿಗೆ ವಿಷ ಹಾಕಿ ಕೊಂದವರ ವಿರುದ್ಧ ಕೋಳಿ ಮಾಲೀಕರು ಆಕ್ರೋಶ ಹೊರ ಹಾಕಿದ್ದು, ಕಿಡಿಗೇಡಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಕ್ರೋಶ ಹೊರ ಹಾಕಿದ್ದಾರೆ.