ದೇಗುಲದ ಗೇಟ್ ಬಿದ್ದು ಮಗು ಮೃತಪಟ್ಟಿದ್ದು ಕುಟುಂಬಸ್ಥರು ಕಣ್ಣೀರ ಕೋಡಿ ಹರಿಸಿದ್ದಾರೆ. ಈ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣಕೆರೆ ತಆಲೂಕಿನ ಹುಂಜನಕೆರೆಯಲ್ಲಿ ನಡೆದಿದೆ. ಮಗು ಮೃತಪಟ್ಟು 12 ದಿನ ಕಳೆದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪ ಕೇಳಿ ಬಂದಿದ್ದು, ನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಿದ್ದಾರೆ. ಬಿಜೆಪಿ ಮುಖಂಡ ಇಂಡವಾಳು ಎಸ್.ಸಚ್ಚಿದಾನಂದ ಮೃತ ಮಗು ಕುಟುಂಬಕ್ಕೆ, 2 ಲಕ್ಷ ರೂ. ಹಾಗೂ ಠೇವಣಿ 25 ಸಾವಿರ ರೂ. ಆರ್ಥಿಕ ನೆರವು ನೀಡಿದ್ದಾರೆ ಎನ್ನಲಾಗುತ್ತಿದೆ.
5 ವರ್ಷದ ಮಗು ಜಿಷ್ಣು ಕುಟುಂಬಸ್ದರೊಂದಿಗೆ ದೇಗುಲಕ್ಕೆ ತೆರಳಿತ್ತು. ಈ ವೇಳೆ ದೇಗುಲದ ಗೇಟ್ ಬಿದ್ದು ಮಗು ಮೃತಪಟ್ಟಿದೆ. ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದ್ರೆ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗುತ್ತಿದೆ. ಮುಜರಾಯಿ ಇಲಾಖೆ ಕುಟುಂಬದ ನಿರ್ಲಕ್ಷ್ಯಕ್ಕೆ ಮಗು ಮೃತಪಟ್ಟಿದೆ ಎಂದು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಶಾಸಕರು, ಅಧಿಕಾರಿಗಳು ಕೂಡ ಪೋಷಕರಿಗೆ ಸಾಂತ್ವನ ಹೇಳಿಲ್ಲ ಎಂದು ಕಿಡಿ ಕಾರಿದ್ದಾರೆ.