ವೈರಲ್

ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲೇ ಮಗು ಸಾವು.! ಸಿಬ್ಬಂದಿ, ವೈದ್ಯರ ಮೇಲೆ ದೂರು ದಾಖಲು

ಕಂದೇಗಾಲ ಗ್ರಾಮದ ವೀರಭದ್ರಪ್ಪ ಎಂಬುವರ ಪತ್ನಿ ಶ್ರುತಿ ಹೆರಿಗೆಗೆ ಅಂತ ಗುಂಡ್ಲುಪೇಟೆ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಗೆ ದಾಖಲಾಗಿದ್ದರು. ಈ ಹಿಂದಿನಿಂದಲೂ ಗರ್ಭಿಣಿ ಮಹಿಳೆ ಅಲ್ಲೇ ಪರೀಕ್ಷೆ ಮಾಡಿಸುತ್ತಿದ್ದರು. ನಿನ್ನೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲದೆ ಹೆರಿಗೆಗೂ ಮುನ್ನ ಮಗು ಸಾವನ್ನಪ್ಪಿದೆ.

ಚಾಮರಾಜನಗರ : ಗುಂಡ್ಲುಪೇಟೆ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಗೆ ಗರ್ಭಿಣಿಯಬ್ಬರು ಹೆರಿಗೆಗೆ ಅಂತ ದಾಖಲಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿದ ಘಟನೆಯೊಂದು ನಡೆದಿದೆ. ಈ ಸಂಬಂಧ ವೈದ್ಯರ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ.

ಹೌದು, ಕಂದೇಗಾಲ ಗ್ರಾಮದ ವೀರಭದ್ರಪ್ಪ ಎಂಬುವರ ಪತ್ನಿ ಶ್ರುತಿ ಹೆರಿಗೆಗೆ ಅಂತ ಗುಂಡ್ಲುಪೇಟೆ ಪಟ್ಟಣದ ತಾಯಿ ಮಕ್ಕಳ ಆಸ್ಪತ್ರೆಯಗೆ ದಾಖಲಾಗಿದ್ದರು. ಈ ಹಿಂದಿನಿಂದಲೂ ಗರ್ಭಿಣಿ ಮಹಿಳೆ ಅಲ್ಲೇ ಪರೀಕ್ಷೆ ಮಾಡಿಸುತ್ತಿದ್ದರು. ನಿನ್ನೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮಯಕ್ಕೆ ಸರಿಯಾಗಿ ವೈದ್ಯರಿಲ್ಲದೆ ಹೆರಿಗೆಗೂ ಮುನ್ನ ಮಗು ಸಾವನ್ನಪ್ಪಿದೆ. ಪ್ರಸೂತಿ ತಜ್ಞ ಡಾ.ಅರುಣ್ ರಜೆಯಲ್ಲಿದ್ದರು. ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲು ಬೇರೆ ವೈದ್ಯರ ಸೂಚನೆ ಮೇರೆಗೆ ಸೂಕ್ತ ಆ್ಯಂಬುಲೆನ್ಸ್ ಕೂಡ ಇಲ್ಲದೆ ಕುಟುಂಬಸ್ಥರ ಪರದಾಡಿದ್ದಾರೆ.

ಆಸ್ಪತ್ರೆ ವೈದಾಧಿಕಾರಿ, ಸಿಬ್ಬಂದಿ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿದಿದ್ದಾರೆ. ವೈದ್ಯಾಧಿಕಾರಿಗಳು ತಡವಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ. ತಾಲೂಕು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷ್ಯದಿಂದ ನಮ್ಮ ಮಗು ಸಾವಿಗೀಡಾಗಿದೆ ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಸ್ಪತ್ರೆಯಲ್ಲಿ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ, ವೈದ್ಯರ ಮೇಲೆ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳಿಗೆ ದೂರು‌ ನೀಡಿದ್ದು, ಮಗು ಕಳೆದುಕೊಂಡ ವೀರಭದ್ರಪ್ಪ ಅವರಿಂದ ಡಿಎಚ್ ಓ ಗೆ ದೂರು ಸಲ್ಲಿಸಿದ್ದಾರೆ. ಪ್ರಸೂತಿ ತಜ್ಞ ಡಾ. ಅರಣ್ ಕುಮಾರ್ ಮೇಲೆ ದೂರು ದಾಖಲಅಗಿದೆ. ಸರಿಯಾಗಿ ಸ್ಪಂದಿಸದ ವೈದ್ಯರು, ಸಿಬ್ಬಂದಿ ವಿರುದ್ಧ  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.