ಕರ್ನಾಟಕ
ಮನಮೋಹನ್ ಸಿಂಗ್ ಬಗ್ಗೆ ಮಕ್ಕಳಿಗೆ ಪಠ್ಯ ಮಾಡ್ಬೇಕು - ಜಿ.ಟಿ. ದೇವೇಗೌಡ
ಜಗತ್ತು ಮತ್ತು ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಸುಧಾರಣೆ ಮಾಡಿದವರು ಮನಮೋಹನ್ ಸಿಂಗ್ ಅಂತಾ ಜಿ.ಟಿ. ದೇವೇಗೌಡ ಹೇಳಿದ್ದಾರೆ..
ಜಗತ್ತು ಮತ್ತು ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾಗ ಸುಧಾರಣೆ ಮಾಡಿದವರು ಮನಮೋಹನ್ ಸಿಂಗ್ ಅಂತಾ ಜಿ.ಟಿ. ದೇವೇಗೌಡ ಹೇಳಿದ್ದಾರೆ.. ಮಾಜಿ ಪ್ರಧಾನಿ ಡಾ. ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ ಅವರು, ಹಲವಾರು ಕ್ಷೇತ್ರಗಳ ಅಭಿವೃದ್ಧಿಗೆ ಮನಮೋಹನ್ ಸಿಂಗ್ ಶ್ರಮಿಸಿದ್ದಾರೆ.. ಆದ್ರೆ ನಾನು ಮಾಡಿರೋ ಕೆಲಸ ಅಂತ ಪ್ರಚಾರವನ್ನೂ ಪಡೆಯಲಿಲ್ಲ ಎಂದಿದ್ದಾರೆ.. ಮನಮೋಹನ್ ಸಿಂಗ್ ಕೆಲಸ ಭಾರತ ಮಾತ್ರವಲ್ಲ.. ವಿಶ್ವವೇ ಕೊಂಡಾಡುತ್ತಿದೆ ಎಂದಿದ್ದಾರೆ.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೆಲಸ ಮಾಡ್ತಿರೋ ಪ್ರತಿನಿಧಿಗಳು ಅವರ ಆದರ್ಶಗಳನ್ನ ಅನುಸರಿಸಬೇಕಿದೆ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಾಡಿದ ಕೆಲಸಗಳು ಮಕ್ಕಳಿಗೂ ತಿಳಿಯಬೇಕು, ಹೀಗಾಗಿ ಈ ಬಗ್ಗೆ ಪಠ್ಯ ಅಳವಡಿಸಬೇಕು ಅಂತಾ ಸರ್ಕಾರಕ್ಕೆ ಜಿ.ಟಿ. ದೇವೇಗೌಡ ಒತ್ತಾಯಿಸಿದ್ದಾರೆ..