ವಿದೇಶ

ಅಮೆರಿಕ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿದ ಚೀನಾ..! ತಾರಕಕ್ಕೇರಿದ ಟ್ಯಾಕ್ಸ್‌ ವಾರ್‌..!

ಅಮೆರಿಕದಿಂದ ಬರುವ ಕಲ್ಲಿದ್ದಲು, ಎಲ್ಎನ್‌ಜಿ ಮೇಲೆ ಶೇ.15ರಷ್ಟು, ಕಚ್ಚಾ ತೈಲದ ಮೇಲೆ ಶೇ.10ರಷ್ಟು ತೆರಿಗೆ ವಿಧಿಸುವುದಾಗಿ ಚೀನಾ ಘೋಷಣೆ ಮಾಡಿದೆ. ಈ ಹೊಸ ನೀತಿ ಫೆಬ್ರವರಿ 10ರಿಂದ ಜಾರಿಗೆ ಬರಲಿದೆ ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.

ಆಮದು ರಾಷ್ಟ್ರಗಳ ಮೇಲೆ ಅಮೆರಿಕದ ಸುಂಕ ಸಮರಕ್ಕೆ ಇದೀಗ ಡ್ರ್ಯಾಗನ್‌ ರಾಷ್ಟ್ರ ಚೀನಾ ತಿರುಗೇಟು ಕೊಟ್ಟಿದೆ. ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗ್ತಿದ್ದಂತೆ ಜಾಗತಿಕಮಟ್ಟದಲ್ಲಿ ಟ್ಯಾಕ್ಸ್‌ ವಾರ್‌ ಜೋರಾಗಿದೆ. ಅಮೆರಿಕಕ್ಕೆ ಆಮದು ಆಗುವ ವಸ್ತುಗಳ ಮೇಲೆ ಶೇಕಡಾ 30ರಷ್ಟು ತೆರಿಗೆ ವಿಧಿಸುತ್ತಿದ್ದಾರೆ. ಇದಕ್ಕೆ ಹಲವು ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಟ್ರಂಪ್‌ ನೀತಿ ಖಂಡಿಸಿ ಮೆಕ್ಸಿಕೋ, ಕೆನಡಾ ರಾಷ್ಟ್ರಗಳು ಅಮೆರಿಕದ ಉತ್ಪನ್ನಗಳ ಮೇಲೂ ಶೇಕಡಾ 25ರಷ್ಟು ಟ್ಯಾಕ್ಸ್‌ ಹಾಕಿ ಸವಾಲು ಎಸೆದಿವೆ. ಈ ಮಧ್ಯೆ ಇದೀಗ ಅಮೆರಿಕದಿಂದ ಬರುವ ಕಲ್ಲಿದ್ದಲು, ಎಲ್ಎನ್‌ಜಿ ಮೇಲೆ ಶೇ.15ರಷ್ಟು, ಕಚ್ಚಾ ತೈಲದ ಮೇಲೆ ಶೇ.10ರಷ್ಟು ತೆರಿಗೆ ವಿಧಿಸುವುದಾಗಿ ಚೀನಾ ಘೋಷಣೆ ಮಾಡಿದೆ. ಈ ಹೊಸ ನೀತಿ ಫೆಬ್ರವರಿ 10ರಿಂದ ಜಾರಿಗೆ ಬರಲಿದೆ ಎಂದು ಚೀನಾ ವಿದೇಶಾಂಗ ಇಲಾಖೆ ತಿಳಿಸಿದೆ.