ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮತ್ತೊಮ್ಮೆ ಮಾಡಿದೆ ಚೀನಾ.. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಡ್ರ್ಯಾಗನ್ ರಾಷ್ಟ್ರ ಮಾಡಿರುವ ಚಮತ್ಕಾರಕ್ಕೆ ಎಲ್ಲರೂ ನಿಬ್ಬೆರಗಾಗಿದ್ರೆ, ಅಮೆರಿಕ ಮಾತ್ರ ಕುಳಿತಲ್ಲಿಯೇ ಕಂಪಿಸಿದೆ.. ಏಕೆಂದರೆ,, ಪ್ರಪಂಚದಲ್ಲಿ ಸದ್ಯ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕಾಲ ಶುರುವಾಗಿದೆ.. ಐಟಿ-ಬಿಟಿಯಿಂದ ಹಿಡಿದು ಎಲ್ಲಾ ಇಂಡಸ್ಟ್ರಿಗೂ ಎಐ ಕಾಲಿಟ್ಟಿದೆ.. ಗೂಗಲ್‌ನ ಓಪನ್ ಎಐ, ಜೆಮಿನಿ ಸೇರಿ ಹಲವು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಗ್ರಾಹಕರ ಕೈಗೆ ಸಿಗ್ತಿವೆ.. ಚಾಟ್‌ಜಿಪಿಟಿ ಮೂಲಕ ಅಮೆರಿಕದ ಎಐ ತಂತ್ರಜ್ಞಾನ ವಿಶ್ವದಲ್ಲೇ ಬಳಕೆಯಾಗುತ್ತಿದೆ.. ಆದ್ರೆ ಇದೀಗ ಈ ಜಾಗಕ್ಕೆ ಕೆಂಪು ರಾಷ್ಟ್ರ ಚೀನಾ ಬಂದು ಕುಳಿತಿದೆ.. ಎಐ ಟೆಕ್ನಾಲಜಿಯಲ್ಲಿ ಕಡಿಮೆ ಅವಧಿಯಲ್ಲಿಯೇ ದೊಡ್ಡಮಟ್ಟದ ಬೆಳವಣಿಗೆ ಕಂಡಿದೆ..
ಹೌದು.. ಡೀಪ್‌ಸೀಕ್.. ಈ ಹೆಸರು ಕೇಳಿದ್ರೇನೆ ಸಾಕು,, ಅಮೆರಿಕದ ದೈತ್ಯ ಕಂಪನಿಗಳು ನಡುಗಿ ಹೋಗುತ್ತವೆ.. ಏಕೆಂದರೆ,,, ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚುವಂತೆ ಮಾಡಿದೆ ಚೀನಾದ ಎಐ ಟೆಕ್ನಾಲಜಿ.. ಅಮೆರಿಕಾದ ಒಪನ್ ಎಐ ಚಾಟ್‌ಜಿಪಿಟಿಗಿಂತ,, ಚೀನಾದ ಡೀಪ್‌ಸೀಕ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಪರ್ಫೆಕ್ಟ್ ಉತ್ತರ ನೀಡುತ್ತಿದೆ.. ಹೀಗಾಗಿಯೇ ಜಾಗತಿಕ ಮಟ್ಟದಲ್ಲಿ ಎಲ್ಲರೂ ಅಮೆರಿಕದ ಎಐಗೆ ಕೈಕೊಟ್ಟು ಚೀನಾದ ಡೀಪ್‌ಸೀಕ್ ಹಿಂದೆ ಬಿದ್ದಿದ್ದಾರೆ..
ವಿಶ್ವದ ದೊಡ್ಡಣ ಅಂತಾ ಕರೆಸಿಕೊಳ್ಳುವ ಅಮೆರಿಕ,, ಎಐ ರೆಡಿ ಮಾಡೋಕೆ ಸಾವಿರಾರು ಕೋಟಿ ರೂಪಾಯಿ ಹೂಡಿಕೆ ಮಾಡಿದೆ.. ಅಷ್ಟೇ ಅಲ್ಲ.. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಟೆಕ್ನಾಲಜಿಗಾಗಿ ಬಹಳಷ್ಟು ಸಮಯ ಕೂಡ ತೆಗೆದುಕೊಂಡಿದೆ.. ಆದ್ರೆ ಕಿಲಾಡಿ ಚೀನಾ,, ಅತೀ ಕಡಿಮೆ ಸಮಯದಲ್ಲಿ.. ಅತೀ ಕಡಿಮೆ ಬೆಲೆಯಲ್ಲಿ.. ಅಮೆರಿಕದ ಎಐ ಸರ್ವೀಸ್‌ಗಿಂತ ಉತ್ತಮವಾದ ಎಐ ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದೆ..
ಇಡೀ ಜಗತ್ತಿನಲ್ಲಿ ಅಮೆರಿಕದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಚಾಟ್‌ಜಿಪಿಟಿ ಮೂಲಕ ಬೆರಳ ತುದಿಯಲ್ಲಿ ಕೆಲಸ ಮಾಡಲಾಗ್ತಿದೆ.. ಮೊದಲಿಗೆ ಟೆಕ್ನಾಲಜಿ ಲೋಕಕ್ಕೆ ಫ್ರೀ ಅಂತ ಎಂಟ್ರಿಕೊಟ್ಟಿದ್ದ ಚಾಟ್‌ಜಿಪಿಟಿಗೆ ಇದೀಗ ಇಂತಿಷ್ಟು ಹಣ ಚಾರ್ಜ್ ಮಾಡಲಾಗ್ತಿದೆ.. ದೊಡ್ಡ ಮಟ್ಟದಲ್ಲಿ ಎಐ ಬಳಸಿಕೊಳ್ಳಬೇಕು ಅಂದ್ರೆ ಅದಕ್ಕೂ ನೀವು ಭಾರೀ ಪ್ರಮಾಣದ ಹಣ ಕೊಡ್ಬೇಕು.. ಆದ್ರೆ ಇದಕ್ಕೆಲ್ಲಾ ಇದೀಗ ಚೀನಾ ಠಕ್ಕರ್ ಕೊಟ್ಟಿದೆ.. ಡೀಪ್‌ಸೀಕ್ ಮೂಲಕ ಎಐ ಟೆಕ್ನಾಲಜಿ ಅಭಿವೃದ್ಧಿಪಡಿಸಲಾಗಿದ್ದು, ವೈಲ್ಟ್‌ವೈಡ್ ಗ್ರಾಹಕರಿಗೆ ಉಚಿತವಾಗಿಯೇ ನೀಡಲಾಗ್ತಿದೆ.. ಅಷ್ಟೇ ಅಲ್ಲ ಆರ್ಟಿಫಿಷಿಯಲ್ ಟೆಕ್ನಾಲಜಿಯಲ್ಲಿ ಅಮೆರಿಕದ ಚಾಟ್‌ಜಿಪಿಟಿಗಿಂತ ಡೀಪ್‌ಸೀಕ್ AI ಹೆಚ್ಚು ನಿಖರವಾಗಿದೆ, ಅಷ್ಟು ಮಾತ್ರವಲ್ಲ ಅಕ್ಯುರೆಸಿ ಕೂಡ ಅಷ್ಟೇ ಫರ್ಪೆಕ್ಟ್ ಆಗಿದೆ.. ಹೀಗಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಹಣ ಹೂಡಿಕೆ ಮಾಡಿದ್ದ ಜಗತ್ತಿನ ದೈತ್ಯ ಕಂಪನಿಗಳಿಗೆ ದೊಡ್ಡಮಟ್ಟದ ಹೊಡೆತವೇ ಬಿದ್ದಿದೆ..
ಡೀಪ್‌ಸೀಕ್ ಮೂಲಕ ಅಮೆರಿಕದ ಎಐ ಕ್ಷೇತ್ರವನ್ನ ಚೀನಾ ನುಂಗಿ ಹಾಕಿದೆ.. ಇದೇ ಹೊತ್ತಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಕುರಿತಾಗಿ ಭಾರತಕ್ಕೂ ಟೆನ್ಶನ್ ಶುರುವಾಗಿದೆ.. ಎಐ ವರ್ಲ್ಡ್‌ಗೆ ಇಂಡಿಯಾ ಇನ್ನೂ ಕಾಲಿಟ್ಟಿಲ್ಲ.. ಅಮೆರಿಕ ತಂತ್ರಜ್ಞಾನ ನಂಬಿಕೆ ಅರ್ಹವಾದ್ರೂ ಚೀನಾ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ.. ಸದ್ಯಕ್ಕೆ ಡೀಪ್‌ಸೀಕ್ ಎಲ್ಲಾ ದೇಶಗಳನ್ನೂ ಸೆಳೆಯುತ್ತಿದ್ದು, ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಪ್ರಪಂಚಕ್ಕೆ ಭಾರತ ಯಾವಾಗ..? ಹೇಗೆ..? ಎಂಟ್ರಿ ಕೊಡಲಿದೆ ಅನ್ನೋದನ್ನ ಕಾದು ನೋಡ್ಬೇಕಿದೆ..