ನೆರೆಯ ಚೀನಾ ದೇಶ 6ನೇ ತಲೆಮಾರಿನ ಯುದ್ಧ ವಿಮಾನ ಪರೀಕ್ಷಿಸುತ್ತಿದೆ, ನಾವು ಇನ್ನೂ ತೇಜಸ್ ಯುದ್ಧ ವಿಮಾನಗಳ ಸ್ವಾಧೀನಕ್ಕಾಗಿ ಕಾಯುತ್ತಿದ್ದೇವೆ ಎಂದು IAF ಮುಖ್ಯಸ್ಥ ಅಮರ್‌ಪ್ರೀತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.. ಭಾರತೀಯ ವಾಯುಸೇನೆಗೆ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್ ವಿತರಣೆ ವಿಳಂಬದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.. 21ನೇ ಸುಬ್ರೋತೋ ಮುಖರ್ಜಿ ಸೆಮಿನಾರ್‌ನಲ್ಲಿ ಮಾತನಾಡಿದ ಸಿಂಗ್,, 2009-2010ರಲ್ಲಿ ಆರ್ಡರ್ ಮಾಡಿದ ಮೊದಲ ಬ್ಯಾಚ್ 40 ವಿಮಾನಗಳು ಇನ್ನೂ ಸಂಪೂರ್ಣವಾಗಿ ತಲುಪಿಲ್ಲ ಎನ್ನುತ್ತಲೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಚೀನಾದ ವಾಯುಪಡೆ ಆಧುನೀಕರಣದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ..
ಅಲ್ಲದೇ 6ನೇ ತಲೆಮಾರಿನ ಯುದ್ಧ ವಿಮಾನಗಳನ್ನ ಚೀನಾವೂ ಪರೀಕ್ಷಿಸಿದೆ.. ಈ ಮಧ್ಯೆ ಪಾಕಿಸ್ತಾನವು ಚೀನಾದಿಂದ ಐದನೇ ತಲೆಮಾರಿನ ಫೈಟರ್ ಜೆಟ್‌ಗಳನ್ನು ಖರೀದಿಸಬಹುದು ಎಂಬ ಚರ್ಚೆ ನಡೆಯುತ್ತಿವೆ ಹೀಗಾಗಿ ಭಾರತವೂ ಎಚ್ಚರಿಕೆ ವಹಿಸಬೇಕಿದೆ ಎಂದಿದ್ದಾರೆ.. ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಹಣ ವಿನಿಯೋಗಿಸಬೇಕು ಮತ್ತು ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವವನ್ನು ಹೆಚ್ಚಿಸಬೇಕು.. ನಾವು ನಮ್ಮ ವೈಫಲ್ಯಗಳಿಂದ ಕಲಿಯಬೇಕು ಮತ್ತು ಮುಂದೆ ಸಾಗಬೇಕೇ ಹೊರತು ಯಾರಿಗೂ ಭಯಪಡಬಾರದು.. ನಾವು ಪ್ರಸ್ತುತ ರಕ್ಷಣಾ ಬಜೆಟ್‌ನ ಐದು ಪ್ರತಿಶತವನ್ನು ಸಂಶೋಧನೆ ಮತ್ತು ಅಭಿವೃದ್ಧಿಗೆ ಖರ್ಚು ಮಾಡುತ್ತಿದ್ದೇವೆ.. ಆದರೆ ಅದನ್ನು 15%ಗೆ ಹೆಚ್ಚಿಸಬೇಕು.. ಸಂಶೋಧನೆ ಮತ್ತು ತಂತ್ರಜ್ಞಾನವನ್ನು ಸಮಯಕ್ಕೆ ಪೂರ್ಣಗೊಳಿಸದಿದ್ದರೆ, ಅವುಗಳು ತಮ್ಮ ಉಪಯುಕ್ತತೆ ಕಳೆದುಕೊಳ್ಳುತ್ತವೆ ಎಚ್ಚರಿಸಿದ್ದಾರೆ..